ನಟಿ ಸಮಂತಾ ತಮ್ಮ ಅಭಿಮಾನಿಗಳ ದಿಕ್ಕು ತಪ್ಪಿಸುತ್ತಿದ್ದಾರೆ..! ವೈದ್ಯರ ಪೋಸ್ಟ್ ವೈರಲ್
Samantha Latest News : ಬಹುಭಾಷಾ ನಟಿ ಸಮಂತಾ ಇತ್ತೀಚೆಗಷ್ಟೇ ಸಿನಿಮಾ ದಿಂದ ದೂರ ಉಳಿದಿದ್ದು, ತಮ್ಮ ಆರೋಗ್ಯ ರಕ್ಷಣೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸ್ಯಾಮ್ ನೀಡಿದ ಹೇಳಿಕೆಗೆ ಇದೀಗ ವೈದ್ಯರೊಬ್ಬರು ಕಿಡಿಕಾರಿದ್ದಾರೆ.
ಹೌದು.. ಸಮಂತಾ ಟೇಕ್ 20 ಎಂಬ ಹೆಲ್ತ್ ಪಾಡ್‌ಕಾಸ್ಟ್‌ನ ಅರಂಭಿಸಿದ್ದಾರೆ. ಈ ಮೂಲಕ ಅವರು ತಮ್ಮ ಅನುಯಾಯಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಪೈಕಿ ಮೊದಲ ಸಂಚಿಕೆಯಲ್ಲಿ ಸಮಂತಾ ನೀಡಿರುವ ಕೆಲವು ಹೇಳಿಕೆಗಳ ಬಗ್ಗೆ ಓರ್ವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಟಿ ಸಮಂತಾ ತನ್ನ 33 ಮಿಲಿಯನ್ ಫಾಲೋವರ್ಸ್‌ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿವರ್ ಆರೋಗ್ಯಕ್ಕೆ ದಂಡೇಲಿಯನ್ ಮೂಲಿಕೆ ಅತ್ಯುತ್ತಮ ಔಷಧ ಅಂತ ಪಾಡ್‌ಕಾಸ್ಟ್‌ನಲ್ಲಿ ಹೇಳುವ ಮೂಲಕ ನಟಿ ಸಮಂತಾ ತಮ್ಮ ಅನುಯಾಯಿಗಳ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಇದು ಸರಿಯಾದ ಮಾಹಿತಿ ಅಲ್ಲ ಅಂತ ವೈದ್ಯರು ಪೋಸ್ಟ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಮಯೋಸಿಟಿಸ್ ನಿಂದ ಬಳಲುತ್ತಿದ್ದ ಸ್ಯಾಮ್ ಸಿನಿಮಾ ಕೆಲಸದಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪಕೃತಿ ಮಧ್ಯ ನಿಂತ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆಗಾಗ ಸ್ಯಾಮ್ ತಮ್ಮ ಗೆಳೆಯರ ಜೊತೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಇನ್ನು ಶೀಘ್ರದಲ್ಲೇ ವರುಣ್ ಧವನ್ ಜೊತೆ ಸಿಟಾಡೆಲ್ ಇಂಡಿಯಾ ಸರಣಿಯ ಮೂಲಕ ರಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಸಧ್ಯ ವೈದ್ಯರ ಟೀಕೆಗೆ ನಟಿ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾಯ್ದು ನೋಡಬೇಕಿದೆ.
Share this content:
Post Comment