Loading Now

ನಮ್ರತಾ ಗೌಡ್‌ ಡಾನ್ಸ್‌ ವಿಡಿಯೋ ವೈರಲ್‌..! ಹಾಟ್‌ಲುಕ್‌ನಲ್ಲಿ ಬಿಗ್‌ಬಾಸ್‌ ಸುಂದರಿ

ನಮ್ರತಾ ಗೌಡ್‌ ಡಾನ್ಸ್‌ ವಿಡಿಯೋ ವೈರಲ್‌..! ಹಾಟ್‌ಲುಕ್‌ನಲ್ಲಿ ಬಿಗ್‌ಬಾಸ್‌ ಸುಂದರಿ

Namratha Gowda : ಬಿಗ್‌ ಬಾಸ್‌ 10ರ ಸ್ಪರ್ಧಿ ನಟಿ, ನಮ್ರತಾ ಗೌಡ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಯುವ ಸಿನಿಮಾದ ಹಾಡೊಂದಕ್ಕೆ ಡಾನ್ಸರ್‌ ಕಿಶನ್‌ ಬಿಳಗಲಿ ಜೊತೆ ಹೆಜ್ಜೆ ಹಾಕಿರವ ರೀಲ್‌ ಸಖತ್‌ ವೈರಲ್‌ ಆಗಿದೆ.

ʼಯುವʼ ಸಂತೋಷ್ ಆನಂದ್​ರಾಮ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ. ಈ ಸಿನಿಮಾ ಮಾರ್ಚ್ 29ರಂದು ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿ ನಿರ್ಮಾಣವಾದ ಚಿತ್ರದಲ್ಲಿ, ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಹಾಗೂ ಸಪ್ತಮಿ ಗೌಡ ಅಭಿನಯಿಸಿದ್ದಾರೆ.

ಇತ್ತೀಚಿಗೆ ಯುವ ಸಿನಿಮಾದಿಂದ ಕವಿತೆ ಎಂಬ ಹಾಡು ರಿಲೀಸ್‌ ಆಗಿತ್ತು. ಇದೇ ಹಾಡಿಗೆ ನಮ್ರತಾ ಗೌಡ ಮತ್ತು ಕಿಶನ್‌ ಡಾನ್ಸ್‌ ಮಾಡಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇಬ್ಬರ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ. ನಟಿ ಸಪ್ತಮಿ ಗೌಡ, ಹಿತಾ ಚಂದ್ರಶೇಖರ್ ಸೇರಿ ಅನೇಕ ನಟ ನಟಿಯರು ಸಹ ಈ ವಿಡಿಯೋಗೆ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Share this content:

Post Comment

You May Have Missed