ಡಾಲಿ, ಶಿವಣ್ಣ ಜೊತೆ ನಟಿಸ್ಬೇಕಾ..? ಇಲ್ಲಿದೆ ಸುವರ್ಣ ಅವಕಾಶ
Uttarakaanda movie audition : ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಉತ್ತರಕಾಂಡ’ ಚಿತ್ರಕ್ಕಾಗಿ ಚಿತ್ರ ತಂಡ ಇದೀಗ ಆಡಿಷನ್ ಆಯೋಜಿಸಿದೆ. ಸಿನಿಮಾದಲ್ಲಿ ನಟಿಸಲು ಚಾನ್ಸ್ ಗಾಗಿ ಕಾಯುತ್ತಿದ್ದವರು ಇದರ ಲಾಭ ಪಡೆಯಬಹುದು.
ಹೌದು.. “ಉತ್ತರಕಾಂಡ” ಚಿತ್ರವು ಒಂದು ಕ್ರೈಂ ಡ್ರಾಮಾ ಚಿತ್ರವಾಗಿದ್ದು, ಇದನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್, ಡಾಲಿ ಧನಂಜಯ, ಮೋಹಕ ತಾರೆ ರಮ್ಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಈ ಚಿತ್ರಕ್ಕಾಗಿ ಚಿತ್ರ ತಂಡವು ಉತ್ತರ ಕರ್ನಾಟಕ ಭಾಗಗಳಲ್ಲಿ ಆಡಿಷನ್ ಆಯೋಜಿಸಿದೆ.
ಮಾರ್ಚ್ 27 ವಿಜಯಪುರದಲ್ಲಿ ಹಾಗೂ 28 ಹುಬ್ಬಳ್ಳಿಯಲ್ಲಿ ಆಡಿಷನ್ ಆಯೋಜಿಸಿದೆ. ಆಡಿಷನ್ ನಲ್ಲಿ ಭಾಗವಹಿಸಲು ವಯೋಮಿತಿ 12ರಿಂದ 75 ವರ್ಷವಾಗಿದ್ದು, ನವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
Share this content:
Post Comment