Salman Khan : ಸಲ್ಲು ಭಾಯ್ ಸಿಂಗಲ್ ಅಲ್ಲ..! 2013ರಲ್ಲೇ ಅವರಿಗೆ ಮದುವೆ ಆಗಿತ್ತಂತೆ..
Salman Khan marriage : ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಹಿಂದಿ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಸೂಪರ್ ಸ್ಟಾರ್ ನಟ ಸಲ್ಲು ಭಾಯ್ ನೀಡಿದ್ದಾರೆ. ಇನ್ನು ವಯಸ್ಸು ಐವತ್ತು ದಾಟಿದರೂ ಸಲ ಟೈಗರ್ ಇನ್ನೂ ಸಿಂಗಲ್. ಆದ್ರೆ ನಟನಿಗೆ 2013ರಲ್ಲಿ ಮದುವೆಯಾಗಿತ್ತು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಹೌದು.. ಸಲ್ಮಾನ್ ಖಾನ್ 2013ರಲ್ಲಿ ಛತ್ತೀಸ್ ಗಢ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಷಯ ನ್ಯಾಯಾಲಯದವೆಗೂ ಹೋಗಿತ್ತು. ಛತ್ತೀಸ್‌ಗಢದ ಬೈಕುಂಟ್‌ಪುರದ ರಾಣಿ ಎಂಬ ಮಹಿಳೆಯನ್ನು ಸಲ್ಮಾನ್ ಖಾನ್ ಮದುವೆಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿಷಯವಾಗಿ ಯುವತಿಯ ಚಿಕ್ಕಮ್ಮ ಬಸಂತಿಬಾಯಿ ನ್ಯಾಯಾಲಯದಲ್ಲಿ ಆಕೆಯ ವಿರುದ್ಧ ಅರ್ಜಿ ಸಲ್ಲಿಸಿದರು.
ಏನಿದು ಪ್ರಕರಣ : ಛತ್ತೀಸ್‌ಗಢದ ರಾಣಿ ಎಂಬ ಮಹಿಳೆ ಬಸಂತ್ ಲಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಕೆಲವು ವರ್ಷಗಳ ನಂತರ ಅಂದ್ರೆ 2013 ರಲ್ಲಿ ಬಸಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮರಣದ ನಂತರ, ಆತನ ಕೆಲಸವು ಅವನ ಹೆಂಡತಿಗೆ ಹೋಗಬೇಕು. ಆದರೆ ಬಸಂತ್ ಲಾಲ್ ಅವರ ತಾಯಿ ಬಸಂತಿಬಾಯಿ ಇದನ್ನು ವಿರೋಧಿಸಿದರು. ರಾಣಿ ತನ್ನ ಸೊಸೆಯಲ್ಲ ಎಂದು ಆಕ್ಷೇಪಿಸಿದರು. ಇದರೊಂದಿಗೆ ರಾಣಿ ಛತ್ತೀಸ್‌ಗಢ ನ್ಯಾಯಾಲಯದ ಮೊರೆ ಹೋಗಿದ್ದರು.
ಬಸಂತ್ ಲಾಲ್ ಸಾವಿನ ನಂತರ ರಾಣಿ ಓಡಿಹೋಗಿ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ರನ್ನು ಮದುವೆಯಾದರು ಎಂದು ಬಸಂತಿಬಾಯಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅಲ್ಲದೆ, ರಾಣಿ ಮತ್ತು ನಟ ಸಲ್ಮಾನ್ ಖಾನ್ ಜೊತೆಗಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಲಾಯಿತು. 2013 ರಿಂದ, ಈ ಪ್ರಕರಣವು ಛತ್ತೀಸ್‌ಗಢದ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಆದರೆ, ಪ್ರಕರಣದಲ್ಲಿ ಯಾವುದೇ ಪಕ್ಷದ ಪರವಾಗಿ ತೀರ್ಪು ಬಂದಿಲ್ಲ.
Share this content:
Post Comment