ಚರ್ಚೆಗೆ ಕಾರಣವಾಯ್ತು ಪವಿತ್ರಗೌಡ ʼ777ʼ ಟ್ಯೂಟು..! ʼDBossʼಗೂ ಹಚ್ಚೆಗೆ ಇದ್ಯಾ ಸಂಬಂಧ?
Pavithra Gowda tattoo : ಸ್ಯಾಂಡಲ್‌ವುಡ್ ನಟಿ ಪವಿತ್ರ ಗೌಡ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದರು. ಇತ್ತೀಚಿಗಷ್ಟೇ ನಟ ದರ್ಶನ್ ವಿಚಾರವಾಗಿ ಚರ್ಚೆಗೆ ಕಾರಣವಾಗಿದ್ದರು. ಇದೀಗ ಮತ್ತೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಮುನ್ನೆಲೆಗೆ ಬಂದಿದ್ದಾರೆ.
ಹೌದು.. ಫೋಟೋ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಜಗಳ ಶುರುವಾಗಿತ್ತು. ಇಬ್ಬರೂ ವ್ಯಕ್ತಿಕ ವಿಚಾರವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಕಥೆ ಮುಗಿದು ತುಂಬ ದಿನಗಳಾಗಿವೆ. ಇದೀಗ ಪವಿತ್ರಗೌಡ ಹಚ್ಚೆ ವಿಚಾರವಾಗಿ ಚರ್ಚೆಗೆ ಕಾರಣವಾಗಿದ್ದಾರೆ.
ಪವಿತ್ರಾ ಗೌಡ ತಮ್ಮ ಕೈ ಮೇಲೆ 777 ಅಂತ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನೀತು ವನಜಾಕ್ಷಿ ಪವಿತ್ರಾಗೆ ಟ್ಯಾಟೂ ಹಾಕಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಇನ್ನು ಹಚ್ಚೆಗೂ ಮತ್ತು ದರ್ಶನ್ ಅವರಿಗೂ ಸಂಬಂಧ ಇದೇ ಎಂದು ಹೇಳಲಾಗುತ್ತಿದೆ.
ಈ ಅನುಮಾನ ಹುಟ್ಟಲು ಕಾರಣವೂ ಇದೇ ಅದೇನಪ್ಪಾ ಅಂದ್ರೆ, .. ನಟ ದರ್ಶನ್ ಅವರು ಹುಟ್ಟಿದ ವರ್ಷ 1977, ಅದರಿಂದ 77 ಮತ್ತು ಪವಿತ್ರಾ ಗೌಡ ಅವರ ಮಗಳ ಬರ್ತ್‌ಡೇ ದಿನಾಂಕ್ 7, ಈ ಎರಡನ್ನೂ ಸೇರಿಸಿದರೆ ಬರುವ 777 ಎಂಬ ಸಂಖ್ಯೆಯನ್ನು ಪವಿತ್ರ ತಮ್ಮ ಬಲಗೈ ಮುಂಭಾಗದ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
Share this content:
Post Comment