ಹೆಚ್ಚು ಹಣ ನೀಡುವವರ ಜೊತೆ ರಾತ್ರಿ ಕಳೆಯಬೇಕಿತ್ತು..! ಖ್ಯಾತ ನಟಿ ಹೇಳಿಕೆ ವೈರಲ್
Karishma Kapoor : ಇತ್ತೀಚಿಗೆ ʼಕೋಸ್ಟಿಂಗ್ ಕೌಚ್ʼ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿವೆ. ಸಿನಿ ಜಗತ್ತಿನ ಕರಾಳ ಮುಖ ಬಯಲಾಗುತ್ತಿದೆ. ಈ ಪೈಕಿ ಇದೀಗ ಮಾಜಿ ಸ್ಟಾರ್ ನಟಿ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ.
ಹೌದು.. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಕರಿಷ್ಮಾ ಕಪೂರ್ ತಾವು ಅನುಭವಿಸಿದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ. ಅದು ಬೇರೆ ಯಾರಿಂದಲೂ ಅಲ್ಲ, ಸ್ವಃತ ಪತಿಯಿಂದ. ಯಸ್…. ನಾಯಕಿಯಾಗಿ ಉತ್ತಮ ಹಂತದಲ್ಲಿರುವಾಗಲೇ ಕರೀಷ್ಮಾ ಸಂಜಯ್ ಕಪೂರ್ ಅವರನ್ನು ಮದುವೆಯಾದರು. ಮದುವೆಯ ನಂತರ ಕೆಲವು ವರ್ಷಗಳವರೆಗೆ ಎಲ್ಲವೂ ಸರಿಯಾಗಿತ್ತು, ಆದರೆ ನಂತರ ವಿಚ್ಛೇದನ ಪಡೆದರು.
ಮಾಧ್ಯಮವೊಂದರ ಸಂದರ್ಶನದಲ್ಲಿ ಪತಿಗೆ ವಿಚ್ಛೇದನ ನೀಡಿರುವ ಕಾರಣಗಳನ್ನು ತಿಳಿಸಿರುವ ನಟಿ, ತಮ್ಮ ಪತಿ ತಮ್ಮನ್ನು ಹರಾಜಿಗಿಡುತ್ತಾರೆ ಅಂತ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಯಾರು ಹೆಚ್ಚು ಹಣ ನೀಡುತ್ತಾರೋ ಅವರ ಜೊತೆ ಇಡೀ ರಾತ್ರಿ ಕಳೆಯಬೇಕಾಗುತ್ತದೆ. ಇಂತಹ ಹೇಯ ಕೆಲಸಗಳನ್ನು ಮಾಡಲು ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ಅಲ್ಲದೆ, ಆತನ ವರ್ತನೆ ತಿಳಿದು ವಿಚ್ಛೇದನ ನೀಡಿದ್ದೆ. ಅಷ್ಟೇ ಅಲ್ಲ, ಮೊದಲ ಪತ್ನಿ ಬೇರೆಯಾಗಿದ್ದರೂ ಸಹ ಆಕೆಯೊಂದಿಗೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಾರೆ. ಆತನ ಕಿರುಕುಳ ಸಹಿಸಲಾಗಲಿಲ್ಲ. ಅದಕ್ಕೇ ನಾನು ವಿಚ್ಛೇದನ ಪಡೆದೆ ಅಂತ ನಟಿ ಕರೀಷ್ಮಾ ತಮ್ಮ ಡೈವೋರ್ಸ್‌ಗೆ ಕಾರಣ ತಿಳಿಸಿದರು.
ಇನ್ನು ಕರೀಷ್ಮಾ ಅವರು 2003 ರಲ್ಲಿ ವಿವಾಹವಾದರು, ಕೆಲವು ವರ್ಷಗಳ ಕಾಲ ಚನ್ನಾಗಿದ್ದ ಜೋಡಿ, 2016 ರಲ್ಲಿ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು.
Share this content:
Post Comment