Loading Now

ಗಿಣಿರಾಮನ ಜೊತೆ ಯಜಮಾನನ ಮಡದಿ..! ವಿಜಯಲಕ್ಷ್ಮಿ ದರ್ಶನ್‌ ಕ್ಯೂಟ್‌ ವಿಡಿಯೋ ವೈರಲ್‌

ಗಿಣಿರಾಮನ ಜೊತೆ ಯಜಮಾನನ ಮಡದಿ..! ವಿಜಯಲಕ್ಷ್ಮಿ ದರ್ಶನ್‌ ಕ್ಯೂಟ್‌ ವಿಡಿಯೋ ವೈರಲ್‌

Vijayalakshmi Darshan : ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಅಂತ ಎಲ್ಲರಿಗೂ ಗೊತ್ತಿದೆ. ಅದರಂತೆ ದಚ್ಚು ಪತ್ನಿ ವಿಜಯಲಕ್ಷ್ಮಿ ಕೂಡ ಪ್ರಾಣಿ ಪ್ರಿಯೇ. ಈ ಕುರಿತ ಇಂಟ್ರಸ್ಟಿಂಗ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ದಾಸನ ಅಭಿಮಾನಿಗಳಿಗೆ ಇಷ್ಟವಾಗಿದೆ.

ನಟ ದರ್ಶನ್‌ ಅವರು ಮೈಸೂರಿನಲ್ಲಿರವ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಗಳನ್ನು ಸಾಕಿದ್ದಾರೆ. ಹಸು, ಎತ್ತು, ಮೊಲ, ವಿಶೇಷ ಹಕ್ಕಿಗಳು ಹೀಗೆ ಹಲವಾರು ರೀತಿಯ ಪ್ರಾಣಿಗಳು ದಚ್ಚು ಫಾರ್ಮ್‌ ಹೌಸ್‌ನಲ್ಲಿ ನೋಡುಬಹುದು. ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಸಹ ಪ್ರಾಣಿ ಪ್ರಿಯೆ.

ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದ್ರೆ ನಿಮಗೆ ಯಜಮಾನನ ಮಡದಿಗೆ ಪ್ರಾಣಿಗಳು ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತ್ತದೆ. ಈ ಕುರಿತು ವಿಡಿಯೋ ಇಲ್ಲಿದೆ ನೋಡಿ..

ಕಲರ್‌ ಕಲರ್‌ ಗಿಳಿಗಳನ್ನು ವಿಜಯಲಕ್ಷ್ಮಿಯವರು ಮುದ್ದಾಡಿರುವ ದೃಶ್ಯ ವಿಡಿಯೋದಲ್ಲಿ. ಈ ವಿಡಿಯೋ ಡಿಬಾಸ್‌ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದು, ಅತ್ತಿಗೆ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವು ನೆಟ್ಟಿಗರು ಅವರ ಪ್ರಾಣಿ ಪ್ರಿಯತೆ ನೋಡಿ ಗ್ರೇಟ್‌ ಮೇಡಂ ಅಂತ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Share this content:

Post Comment

You May Have Missed