ಆಸ್ಕರ್ ವೇದಿಕೆ ಮೇಲೆ ಬೆತ್ತಲೆಯಾಗಿ ಬಂದ WWW ಸೂಪರ್ ಸ್ಟಾರ್ ಜಾನ್ಸ್ ಸೀನಾ..!
John Cena Naked : WWW ಸೂಪರ್ ಸ್ಟಾರ್, ನಟ ಜಾನ್ ಸೀನಾ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿಯನ್ನು ನೀಡಲು ವೇದಿಕೆಯ ಮೇಲೆ ನಗ್ನವಾಗಿ ಬಂದ ಘಟನೆ ಆಸ್ಕರ್ 2024 ( Oscars 2024 ) ಸಮಾರಂಭದಲ್ಲಿ ನಡೆದಿದ್ದು, ಅಲ್ಲಿ ನೆರೆದಿದ್ದ ಸೆಲೆಬ್ರೆಟಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು.. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 96ನೇ ಆಸ್ಕರ್ ಸಮಾರಂಭ ನಡೆಯುತ್ತಿದೆ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಸಂಗೀತ ಸ್ಕೋರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದೇ ವೇಳೆ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ನೀಡಲು ಜಾನ್ ಸೀನಾ ವೇದಿಕೆಯ ಮೇಲೆ ನಗ್ನವಾಗಿ ಬಂದು ಶಾಕ್ ನೀಡಿದರು.
ಅಲ್ಲದೆ, ಬೆತ್ತಲೆಯಾಗಿಯೇ ಹಾಲಿವುಡ್ ತಾರೆ ಎಮ್ಮಾ ಸ್ಟೋನ್ ನಟಿಸಿದ ‘ಪೂವರ್ ಥಿಂಗ್ಸ್’ ಗೆ ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿಯನ್ನು ಘೋಷಿಸಿದರು. ಇನ್ನು ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡುವುದಾದರೆ, ಸೀನಾ ಕಾಸ್ಟ್ಯೂಮ್ ಡಿಸೈನ್ ಎಂಬ ಬೋರ್ಡ್ ಅನ್ನು ಸೊಂಟದ ಕೆಳಬಾಗ ಹಿಡಿದು ಕೊಂಡಿರುವುದನ್ನು ನೋಡಬಹುದು.
Share this content:
Post Comment