Loading Now

Shivanna : ಸಿನಿಮಾ ಪ್ರಾರಂಭದಲ್ಲಿ ಅಪ್ಪು ಫೋಟೋ ಹಾಕಲೇಬೇಕು ಅಂತಿಲ್ಲ..! ಶಿವಣ್ಣ ಹೇಳಿಕೆ

Shivanna : ಸಿನಿಮಾ ಪ್ರಾರಂಭದಲ್ಲಿ ಅಪ್ಪು ಫೋಟೋ ಹಾಕಲೇಬೇಕು ಅಂತಿಲ್ಲ..! ಶಿವಣ್ಣ ಹೇಳಿಕೆ

Shivarajkumar : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯ ನಂತರ ಬಿಡುಗಡೆಯಾಗುತ್ತಿರುವ ಪ್ರತಿ ಸಿನಿಮಾದ ಪ್ರಾರಂಭದಲ್ಲಿ ಅವರ ಫೋಟೋ ಹಾಕಿ ಗೌರವ ನಮನ ಸಲ್ಲಿಸಲಾಗುತ್ತಿದೆ. ಇದೇ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ನಟ ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕರಟಕ ದಮನಕ ಸಿನಿಮಾದ ಸಂದರ್ಶನದ ವೇಳೆ ಈ ಕುರಿತು ಮಾತನಾಡಿರುವ ಶಿವಣ್ಣ, ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳಲ್ಲಿ ಅಪ್ಪು ಫೋಟೋ ಹಾಕಲೇಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಬೇಡಿ. ಪೋಟೋ ಹಾಕಿದ್ರೆ ಮಾತ್ರ ಗೌರವ ಕೊಟ್ಟಂತಾಗಲ್ಲ ಅಂತ ಹೇಳಿದ್ದಾರೆ.



ಅಲ್ಲದೆ, ಪ್ರೀತಿ ಮನಸ್ಸಿನಲ್ಲಿ ಇರಬೇಕು. ಹಾಗಿದ್ರೆ ಅಪ್ಪಾಜಿ, ವಿಷ್ಣು ಸರ್‌, ಅಂಬರೀಶ್‌ ಸರ್‌, ಶಂಕರ್‌ನಾಗ್‌ ಫೋಟೋ ಹಾಕಬೇಕಾಗುತ್ತೆ. ಫೋಟೋ ಹಾಕುವುದು ಸರಿಯಲ್ಲ, ಅವರ ನೆನಪುಗಳು ಯಾವತ್ತಿದ್ದರೂ ಶಾಶ್ವತ. ಅಪ್ಪು ಫೋಟೋ ಹಾಕಿ, ವಿ ಮಿಸ್‌ ಯೂ ಅಪ್ಪು, ವಿ ಲವ್‌ ಯೂ ಅಪ್ಪು ಅನ್ನೋದೆಲ್ಲ ಬೇಡ ಎಂದಿದ್ದಾರೆ.

ಇನ್ನು ಅಪ್ಪು ಅವರನ್ನು ನಾವು ಹೃದಯದಿಂದ ಪ್ರೀತಿಸಬೇಕು. ಫೋಟೋ ಹಾಕಿದ್ರೆ ಮಾತ್ರ ಲವ್‌ ಅಲ್ಲ ಅಂತ ನಟ ಶಿವರಾಜ್‌ಕುಮಾರ್‌ ಅವರು ಹೇಳಿದರು. ಸಧ್ಯ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಸಧ್ಯ ಶಿವಣ್ಣ ಕರಟಕ ದಮನಕ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ.

Share this content:

Post Comment

You May Have Missed