Bhairathi Ranagal : ಶಿವಣ್ಣ ಫ್ಯಾನ್ಸ್‌ಗೆ ಸಿಹಿ ಸುದ್ದಿ..! ʼಭೈರತಿ ರಣಗಲ್ʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
Bhairathi Ranagal Release date : ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼಭೈರತಿ ರಣಗಲ್ʼ. ಇದೀಗ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಕುರಿತು ಶಿವಣ್ಣ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು.. ಭೈರತಿ ರಣಗಲ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಕುರಿತು ಶಿವಣ್ಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಸಿನಿಮಾ ತೆರೆ ಮೇಲೆ ಬರಲು ಮೂಹೂರ್ತ ಫಿಕ್ಸ್ ಆಗಿದೆ.
ಸಧ್ಯ ಶಿವಣ್ಣ ಕರಟಕ ದಮನಕ ಚಿತ್ರದ ಸಕ್ಸಸ್ ಮೂಡ್‌ನಲ್ಲಿದ್ದಾರೆ. ಇದೇ ವೇಳೆ ತಮ್ಮ ನಿರ್ಮಾಣದ ಭೈರತಿ ರಣಗಲ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ದೊಡ್ಮನೆ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಅಪ್ಪಳಿಸಲಿದೆ.
ಇನ್ನು ಭೈರತಿ ರಣಗಲ್ ಸಿನಿಮಾ ಮಫ್ತಿ ಚಿತ್ರದ ಪ್ರೀಕ್ವೆಲ್ ಅಂತ ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಿದ್ದಾರೆ. ಮಫ್ತಿ ಚಿತ್ರದ ಟೈಮ್‌ನಲ್ಲಿಯೇ ಶಿವಣ್ಣ ಈ ಸಿನಿಮಾದ ಕಥೆಯನ್ನ ಒಪ್ಪಿಕೊಂಡಿದ್ದರು. ಇದೀಗ ಶಿವಣ್ಣ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ಶಿವಣ್ಣನಿಗೆ ಜೊತೆಯಾಗಿ ನಟಿಸಿದ್ದಾರೆ.
Share this content:
Post Comment