Loading Now

Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೆ..! ಭಾರತದ ಸಿನಿ ಶೆಟ್ಟಿ..?

Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೆ..! ಭಾರತದ ಸಿನಿ ಶೆಟ್ಟಿ..?

Miss World 2024 winner : 28 ವರ್ಷಗಳ ನಂತರ ಭಾರತದಲ್ಲಿ 71 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಆಯೋಜಿಸಿತ್ತು. ಈ ಸ್ಪರ್ಧೆಗಳಲ್ಲಿ, 112 ದೇಶಗಳ ಸೌಂದರ್ಯ ರಾಣಿಯರು ಸ್ಪರ್ಧಿಸಿದರು. ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ( Krystyna Pyszkova ) ವಿಶ್ವ ಸುಂದರಿ-2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕ್ರಿಸ್ಟಿನಾ ಪಿಸ್ಕೋವಾ (ಜೆಕ್ ರಿಪಬ್ಲಿಕ್), ಯಾಸ್ಮಿನ್ ಅಜಿಟೌನ್ (ಲೆಬನಾನ್), ಆಚೆ ಅಬ್ರಹಾಮ್ಸ್ (ಟ್ರಿನಿಡಾಡ್ ಮತ್ತು ಟೊಬಾಗೊ) ಮತ್ತು ಲೆಸಾಗೊ ಚೊಂಬೊ (ಬೋಟ್ಸ್‌ವಾನಾ) ಅಗ್ರ-4ರಲ್ಲಿದ್ದಾರೆ. ಈ ಸ್ಪರ್ಧೆಗಳಲ್ಲಿ ಭಾರತ ಮತ್ತೊಮ್ಮೆ ನಿರಾಸೆಯನ್ನು ಎದುರಿಸಿದ್ದು, ದೇಶವನ್ನು ಪ್ರತಿನಿಧಿಸಿದ್ದ ಕನ್ನಡತಿ ಸಿನಿಶೆಟ್ಟಿ ಟಾಪ್-8ಕ್ಕೆ ಸೀಮಿತರಾದರು.

ಸಿನಿಶೆಟ್ಟಿ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡದುಕೊಂಡರು. ಕ್ರಿಸ್ಟಿನಾ ವಿನ್ನರ್ ಹಾಗೂ ಲೆಬನಾನ್ ನ ಅಜಯ್ಟೌನ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. 2022ರ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸಿನಿಶೆಟ್ಟಿ.

ಇನ್ನು ಇದೇ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಅಂಬಾನಿ ಅವರಿಗೆ ʼಮಿಸ್ ವರ್ಲ್ಡ್ ಹ್ಯುಮಾನಿಟೇರಿಯನ್ʼ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Share this content:

Post Comment

You May Have Missed