Loading Now

Sanvi Sudeep : ಕಿಚ್ಚ ಸುದೀಪ್‌ ಪುತ್ರಿಯ ವಿಡಿಯೋ ವೈರಲ್‌..! ಸಾನ್ವಿ ಕ್ಯೂಟ್‌ ಎಕ್ಸಪ್ರೆಷನ್‌ಗೆ ಫ್ಯಾನ್ಸ್‌ ಫಿದಾ

Sanvi Sudeep : ಕಿಚ್ಚ ಸುದೀಪ್‌ ಪುತ್ರಿಯ ವಿಡಿಯೋ ವೈರಲ್‌..! ಸಾನ್ವಿ ಕ್ಯೂಟ್‌ ಎಕ್ಸಪ್ರೆಷನ್‌ಗೆ ಫ್ಯಾನ್ಸ್‌ ಫಿದಾ

Sanvi Sudeep reels : ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ ಅವರು ಮಗಳು ಸಾನ್ವಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಮಲ್ಟಿ ಟ್ಯಾಲೆಂಟೆಡ್‌, ಬ್ಯೂಟಿಫುಲ್‌ ಸಾನ್ವಿ ರೀಲ್ಸ್‌ ಒಂದಕ್ಕೆ ಆಕ್ಟ್‌ ಮಾಡಿದ್ದು, ಅಭಿನಯ ಚಕ್ರವರ್ತಿ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ..

ಹೌದು.. ಸಾನ್ವಿ ಒಳ್ಳೆಯ ಸಿಂಗರ್‌ ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ಎರಡು ಮಾತು ಆಡಂಗಿಲ್ಲ ಬಿಡಿ. ಆದ್ರೆ ನೀವು ಅವರು ನಟಿಸಿರುವ ವಿಡಿಯೋವನ್ನು ಎಂದಾದರೂ ನೋಡಿದ್ದೀರಾ.. ಸಾನ್ವಿ ಸಖತ್ತಾಗಿ ಆಕ್ಟ್‌ ಮಾಡ್ತಾರೆ ಗೊತ್ತಾ.. ಸಧ್ಯ ಈ ವಿಡಿಯೋ ಮೂಲಕ ಅಭಿನಯದ ಚಕ್ರವರ್ತಿ ಪುತ್ರಿ ಅಂತ ಸಾಭೀತು ಮಾಡಿದ್ದಾರೆ.

ಇದುವರೆಗೂ ಸಾನ್ವಿ ಯಾವುದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿಲ್ಲ, ಬದಲಾಗಿ ರೀಲ್‌ ಒಂದಕ್ಕೆ ವಿಡಿಯೋ ಮಾಡಿದ್ದು, ಕಿಚ್ಚನ ಮಗಳ ಕ್ಯೂಟ್‌ ಎಕ್ಸಪ್ರೇಶನ್ ನೋಡಿ ಪ್ಯಾನ್ಸ್‌ ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ, ಸಿನಿಮಾದಲ್ಲಿ ಟ್ರೈ ಮಾಡಿ ಅಂತ ಸಲಹೆ ಬೇರೆ ನೀಡುತ್ತಿದ್ದಾರೆ. ಸಾನ್ವಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ.

ಸಾನ್ವಿ ಅಪ್ಪನ ಸಿನಿಮಾವೊಂದರ ಡೈಲಾಗ್‌ಗೆ ರೀಲ್ಸ್‌ ಮಾಡಿದ್ದಾರೆ. ವಿಡಿಯೋದಲ್ಲಿ, ಯಾರಾದ್ರು ಗರ್ಲ್ ಫ್ರೆಂಡ್ ಇದ್ದಾರಾ? ಅಂತ ಸಾನ್ವಿ ಕೇಳ್ತಾರೆ. ಅದಕ್ಕೆ ಒಬ್ಬಳು ಇದ್ಲು. ಆದರೆ ಮದುವೆ ಆಯಿತು ಅಂತಲೇ ಸುದಿಪ್ ಹೇಳ್ತಾರೆ. ಆಗ ಸಾನ್ವಿ ಕೊಟ್ಟ ಎಕ್ಸಪ್ರೆಷನ್ ಸಖತ್ತಾಗಿದೆ. ಸಧ್ಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

Share this content:

Post Comment

You May Have Missed