Loading Now

ತಮಿಳು ಸೂಪರ್‌ ಸ್ಟಾರ್‌ ನಟ ಅಜಿತ್‌ಗೆ ಬ್ರೈನ್ ಟ್ಯೂಮರ್..!? ಶಸ್ತ್ರಚಿಕಿತ್ಸೆ, ಹೇಗಿದೆ ಆರೋಗ್ಯ

ತಮಿಳು ಸೂಪರ್‌ ಸ್ಟಾರ್‌ ನಟ ಅಜಿತ್‌ಗೆ ಬ್ರೈನ್ ಟ್ಯೂಮರ್..!? ಶಸ್ತ್ರಚಿಕಿತ್ಸೆ, ಹೇಗಿದೆ ಆರೋಗ್ಯ

Actor Ajith Kumar : ಕಾಲಿವುಡ್‌ ಖ್ಯಾತ ನಟ ತಲಾ ಅಜಿತ್ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಬ್ರೈನ್ ಟ್ಯೂಮರ್ ಇದ್ದು, ಸತತ 4 ಗಂಟೆಗಳ ಚಿಕಿತ್ಸೆ ನಂತರ ತೆಗೆಯಲಾಗುವುದು ಎಂದು ಹೇಳಲಾಗುತ್ತಿದೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ.

ನಟ ಅಜಿತ್ ಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಕಳೆದ ಕೆಲವು ದಿನಗಳ ಹಿಂದೆ ತಲಾ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಹೋಗಿದ್ದರು. ಈ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಇದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಆಸ್ಪತ್ರೆಗೆ ತೆರಳಿದ್ದಾರೆ ಎಂಬು ಸುದ್ದಿ ಕೇಳಿ ಬರುತ್ತಿದೆ.

ʼವಿಡಸೇಲಿʼ ಸಿನಿಮಾದಲ್ಲಿ ನಟಿಸುತ್ತಿರುವ ಅಜಿತ್ ಕುಮಾರ್ ನಿನ್ನೆ ಇದ್ದಕ್ಕಿದ್ದಂತೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ಕುರಿತು ಕೆಲವು ಫೋಟೋಗಳು ವೈರಲ್‌ ಆಗಿದ್ದವು, ಅವುಗಳನ್ನು ನೋಡಿ ತಲಾ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಆದ್ರೆ ಸತ್ಯಾಂಶ ತಿಳಿದು ನಿಟ್ಟುಸಿರು ಬಿಟ್ಟಿದ್ದರು.

ಇದೀಗ ಚಿತ್ರ ವಿಚಿತ್ರವಾದ ಅಜಿತ್ ವೈದ್ಯಕೀಯ ಪರೀಕ್ಷೆಯ ವರದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಪೈಕಿ ನಿನ್ನೆ ರಾತ್ರಿ ಅಜಿತ್ ಗೆ ಬ್ರೈನ್ ಟ್ಯೂಮರ್ ಇದೆ ಅಂತ ತಿಳಿದು ಬಂದಿದ್ದು, 4 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ ಎಂಬ ಸುದ್ದಿ ವೈರಲ್‌ ಆಗಿದೆ. ಈ ಬಗ್ಗೆ ಅಜಿತ್ ಅವರ ವಕ್ತಾರರು ಸ್ಪಷನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸುರೇಶ್‌ ಚಂದ್ರ, ಅಜಿತ್‌ಗೆ ಬ್ರೈನ್ ಟ್ಯೂಮರ್ ಇಲ್ಲ ಮತ್ತು ಶಸ್ತ್ರಚಿಕಿತ್ಸೆಯೂ ಇಲ್ಲ. ಸಿನಿಮಾ ಚಿತ್ರೀಕರಣ ಇರುವುದರಿಂದ ಸಾಮಾನ್ಯವಾಗಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬಂದ ಸುದ್ದಿ ಸುಳ್ಳು ಅಂತ ತಿಳಿಸಿದ್ದಾರೆ. ಸಧ್ಯ ಅಜಿತ್‌ ವಿಡಸೇಲಿ ಅಂತ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

Share this content:

Post Comment

You May Have Missed