Sreeleela : ಆ ತರ ಡ್ಯಾನ್ಸ್ ಮಾಡೋಕೆ ಒಲ್ಲೆ ಅಂದ ಶ್ರೀಲೀಲಾ..! ಪುಷ್ಪಾ 2 ಆಫರ್ ರಿಜೆಕ್ಟ್
Pushpa 2 updates : ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಸಿನಿಮಾಗಳಿಂದ ಕೊಂಚ ಸಮಯ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಇತ್ತೀಚೆಗೆ ಅದಕ್ಕಾಗಿ ನಟಿ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಅಲ್ಲದೆ, ಇದೇ ವೇಳೆ ಬಿಗ್ ಆಫರ್ವೊಂದನ್ನು ರಿಜೆಕ್ಟ್ ಮಾಡಿದ್ದಾರಂತೆ..
ಚಂದನವನದಿಂದ ತೆಲುಗು ಸಿನಿರಂಗಕ್ಕೆ ಹಾರಿರುವ ನಟಿ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಟಾಲಿವುಡ್ ನಲ್ಲಿ ಲೀಲಾ ನಟಿಸಿದ ಎಲ್ಲಾ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾದವು. ಆದರೂ ಶ್ರೀಲೀಲಾ ಕ್ರೇಜ್ ಕೊಂಚವೂ ತಗ್ಗಿಲ್ಲ. ಇದೇ ವೇಳೆ ʼಪುಷ್ಪ 2ʼದಲ್ಲಿ ನಟಿಸಲು ಚೆಲುವೆಗೆ ಬಿಗ್ ಆಫರ್ ಸಿಕ್ಕಿದೆ. ಆದ್ರೆ ಈ ಅವಕಾಶವನ್ನು ನಟಿ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಹೌದು.. ಪುಷ್ಪಾ ಭಾಗ 1 ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಿಟ್ ಗಳಿಸಿತು. ಇದೀಗ ಪುಷ್ಪಾ 2 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದರಿಂದಾಗಿ ನಿರ್ದೇಶಕ ಸುಕುಮಾರ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದ ಸಾಂಗ್ ಊ ಅಂಟಾವಾ ಮಾವ ಸಖತ್ ಹಿಟ್ ಗಳಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ಒಳ್ಳೆ ಕ್ರೇಜ್ ಸಿಕ್ಕಿತ್ತು. ಇದೀಗ ಅಂತಹುದೆ ಒಂದು ಹಾಡನ್ನು ಪಾರ್ಟ್ 2 ರಲ್ಲಿ ಮಾಡ್ಬೇಕು ಅಂತ ಡೈರೆಕ್ಟರ್ ಸುಕುಮಾರ್ ನಿರ್ಧರಿಸಿದ್ದು, ಅದಕ್ಕಾಗಿ ಶ್ರೀಲೀಲಾಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ.
ಆದರೆ, ನಾಯಕಿಯಾಗಿ ನಟಿಸಿ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿರುವ ಶ್ರೀಲೀಲಾ ಐಟಂ ಡ್ಯಾನ್ಸ್ ಮಾಡಿದ್ರೆ ಎಲ್ಲಿ ತನ್ನ ಕೆರಿಯರ್ಗೆ ಹೊಡೆತ ಬೀಳುತ್ತೆ ಅಂತ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಶ್ರೀಲೀಲಾ ಓಳ್ಳೆ ಛಾನ್ಸ್ ಮಿಸ್ ಮಾಡಿಕೊಂಡರು ಅಂತ ಅವರ ಫ್ಯಾನ್ಸ್ ಬೇಸರಗೊಂಡಿದ್ದಾರೆ.
Share this content:
Post Comment