Loading Now

ಇದು ನನ್ನ ಜೀವನದ ಕಠಿಣ ನಿರ್ಧಾರ ! ನಟಿ ಸಮಂತ ಶಾಕಿಂಗ್‌ ಹೇಳಿಕೆ

ಇದು ನನ್ನ ಜೀವನದ ಕಠಿಣ ನಿರ್ಧಾರ ! ನಟಿ ಸಮಂತ ಶಾಕಿಂಗ್‌ ಹೇಳಿಕೆ

ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾಗಳಿಗೆ ಬ್ರೇಕ್‌ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ್ದು, ಆಗಾಗ ಗೆಳೆಯರ ಜೊತೆ ಪ್ರವಾಸ, ಯೋಗ, ಧ್ಯಾನದತ್ತ ಮೊರೆ ಹೋಗುತ್ತಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಧ್ಯ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಒಂದು ಸದ್ದು ಮಾಡುತ್ತಿದೆ. ಅದರಲ್ಲಿ ಯಾರ ಮೇಲೂ ಅವಲಂಬಿತರಾಗುವುದು ಸರಿಯಲ್ಲ ಎಂಬಂತೆ ಪೋಸ್ಟ್ ಹಾಕಿದ್ದು, ಅವರ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.

ವೃತ್ತಿಪರ ಜೀವನದಿಂದ ವಿರಾಮ ತೆಗೆದುಕೊಂಡಿದ್ದೇನೆ. ಇದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ. ಬಾಹ್ಯ ಗಾಯಕ್ಕಿಂತ ಮಾನಸಿಕ ಗಾಯದಿಂದ ಗುಣವಾಗಲು ಹೆಚ್ಚು ಸಮಯ ಬೇಕು ಅಂತ ಸ್ಯಾಮ ಹೇಳಿಕೊಂಡಿದ್ದಾರೆ. ಸಧ್ಯ ಈ ಕುರಿತ ಪೋಸ್ಟ್‌ ವೈರಲ್‌ ಆಗುತ್ತಿದೆ.

Share this content:

Post Comment

You May Have Missed