Priyamani : ಬಿಟೌನ್ ಸೆಲೆಬ್ರೆಟಿಗಳ ರಹಸ್ಯ ಬಯಲು..! ದುಡ್ಡು ಕೊಟ್ಟು ಕರೆಸಕೊಳ್ತಾರೆ… ಎಂದ ನಟಿ ಪ್ರಿಯಾಮಣಿ
Priyamani about bollywood : ಹಲವಾರು ನಟ -ನಟಿಯರು ಬಾಲಿವುಡ್‌ನ ಕರಾಳ ಮುಖವನ್ನು ಒಂದೊಂದಾಗಿ ಬಹಿರಂಗ ಪಡಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ನಟಿ ಪ್ರಿಯಾ ಮಣಿ ಸೇರಿಕೊಂಡಿದ್ದಾರೆ. ಬಾಲಿವುಡ್ ಮಂದಿಯ ರಹಸ್ಯ ಬಯಲು ಮಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಹೌದು.. ಮದುವೆ ಬಳಿಕ ನಟಿ ಪ್ರಿಯಾ ಮಣಿ ಸಾಲು ಸಾಲು ಟಿವಿ ಕಾರ್ಯಕ್ರಮ ಮತ್ತು ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ʼಭಾಮಕಲಾಪʼ ಎಂಬ ತೆಲುಗು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಪ್ರಿಯಾ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ಬಾಲಿವುಡ್ ನಟ- ನಟಿಯರನ್ನು ಪಾಪರಾಜಿಗಳು ಮುತ್ತಿಕೊಳ್ಳುವ ವಿಚಾರವಾಗಿ ಸತ್ಯವೊಂದನ್ನು ಬಯಲಿಗೆಳೆದಿದ್ದಾರೆ.. ಇಷ್ಟು ದಿನ ಪಾಪರಾಜಿಗಳೇ ಸೆಲೆಬ್ರೆಟಿಗಳ ಹಿಂದೆ ಓಡಾಡ್ತಿರುತ್ತಾರೆ ಅಂತ ಜನ ಸಾಮಾನ್ಯರು ಊಹಿಸಿಕೊಂಡಿದ್ದರು. ಆದ್ರೆ, ಪ್ರಚಾರ ಪ್ರಿಯ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ ಅಂತ ಪ್ರಿಯಾ ತಿಳಿಸಿದ್ದಾರೆ.
ಅಲ್ಲದೆ, ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ ಮತ್ತು ವಿಡಿಯೋ ತೆಗೆದು ಪ್ರಚಾರ ಮಾಡೋದು, ನಟ-ನಟಿಯರ ಪಿಆರ್ ತಂಡದವರೇ ಪಾಪರಾಜಿಗಳಿಗೆ ಮಾಹಿತಿ ನೀಡ್ತಾರೆ. ಇದೆಲ್ಲಾ ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರ ಅಂತ ಬಾಲಿವುಡ್ ಮಂದಿಯ ಪಬ್ಲಿಸಿಟಿ ತಂತ್ರವನ್ನು ಪ್ರಿಯಾ ಬಹಿರಂಗಗೊಳಿಸಿದ್ದಾರೆ.
ಸಧ್ಯ ತೆಲುಗು ಟಿವಿ ಕಾರ್ಯಕ್ರಮ ಮತ್ತು ಸಾಲು ಸಾಲು ವೆಬ್ ಸೀರಿಸ್‌ನಲ್ಲಿ ನಟಿ ಪ್ರಿಯಾ ಮಣಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗೆಯಾದ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ನಟಿಸಿದ್ದರು. ಆರ್ಟಿಕಲ್ 370 ಸಿನಿಮಾದಲ್ಲಿಯೂ ಪಿಲ್ಲು ಮಣಿ ಅಭಿನಯಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
Share this content:
Post Comment