Jyothika suriya : ವಿಚ್ಛೇದನದ ಬಗ್ಗೆ ಜ್ಯೋತಿಕಾ ಸೂರ್ಯ ಕ್ಲಾರಿಟಿ..! ಏನಾಯ್ತು ದಂಪತಿ ನಡುವೆ
ನಟಿ ಜ್ಯೋತಿಕಾ ಮತ್ತು ನಟ ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ, ಅದಕ್ಕಾಗಿಯೇ ಅವರು ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಧ್ಯ ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ನಟ – ನಟಿಯರ ಡಿವೋರ್ಸ್ ಸುದ್ದಿಗಳು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ ಸದ್ದು ಮಾಡಿತ್ತು. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ಜೋಡಿ, ಸೂರ್ಯ ಮತ್ತು ಜ್ಯೋತಿಕಾ ದೂರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಸ್.. ಸೂರ್ಯ ಮತ್ತು ಜ್ಯೋತಿಕಾ ಇಬ್ಬರು ಒಟ್ಟಿಗೆ ಅನೇಕ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಶೂಟಿಂಗ್ ವೇಳೆ ಪರಿಚಯವಾಗಿದ್ದ ಜೋಡಿ ನಡುವೆ ಪ್ರೀತಿ ಹುಟ್ಟಿತ್ತು, ನಂತರ ಮದುವೆಯಾಗಿತ್ತು. ಸಧ್ಯ ಇಬ್ಬರು ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ.
ಆದರೆ ಇತ್ತೀಚೆಗಷ್ಟೇ ಜ್ಯೋತಿಕಾ ಮುಂಬೈಗೆ ತೆರಳಿದ್ದು, ಕೆಲವು ವರ್ಷಗಳಿಂದ ಅಲ್ಲಿಯೇ ಇದ್ದಾರೆ ಎನ್ನಲಾಗಿದೆ. ಇದರೊಂದಿಗೆ ವದಂತಿಯೊಂದು ಹೊರಬಿದ್ದಿದ್ದು, ಜ್ಯೋತಿಕಾ ಮತ್ತು ಸೂರ್ಯ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ನಟಿ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿತ್ತು.
ವಾಸ್ತವವಾಗಿ, ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ವಿವಿಧ ವದಂತಿಗಳು ಹರಡುತ್ತಿವೆ, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯು ಸಹ ಶುರುವಾಗಿದೆ. ಆದರೆ ಈ ಕುರಿತು ಸೂರ್ಯ ಅಥವಾ ಜ್ಯೋತಿಕಾ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅದು ನಿಜವೆಂದು ಎಲ್ಲರೂ ಭಾವಿಸಿದ್ದರು. ಇದೀಗ ಜ್ಯೋತಿಕಾ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಜ್ಯೋತಿಕಾ ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುವುದಲ್ಲಿ ನಿಲ್ಲಿಸಿದ್ದರು. ಇತ್ತೀಚೆಗೆ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸಧ್ಯ ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಆ ಶೂಟಿಂಗ್‌ಗೆ ಹೋಗುವುದಕ್ಕಾಗಿ ಮತ್ತು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಮುಂಬೈಗೆ ತೆರಳಿದ್ದಾರೆ. ಶೂಟಿಂಗ್ ಹಾಗೂ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಅಂತ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
Share this content:
Post Comment