ಇತಿಹಾಸದಲ್ಲೇ ಫಸ್ಟ್ ಟೈಮ್ ʼಡ್ರಾಮಾ ಜೂನಿಯರ್ಸ್ 5ನೇʼ ಸೆಮಿ ಪೈನಲ್ಸ್‌ನಲ್ಲಿ AR ತಂತ್ರಜ್ಞಾನ ಬಳಕೆ..!
Drama Juniors season 5 : ಪುಟ್ಟ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸಿಕೊಡುತ್ತಿರುವ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ 5ನೇ ಸೀಸನ್ ಸಾಕಷ್ಟು ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಎದಿರು ಬರಲು ರೆಡಿಯಾಗಿದೆ.
ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಮನೆಮಂದಿಯನ್ನೆಲ್ಲ ಮನರಂಜಿಸೋ ಡ್ರಾಮಾ ಜೂನಿಯರ್ಸ್ ಇತಿಹಾಸದಲ್ಲೆ ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆಯಲ್ಲಿ ಆಗ್ಯುಮೆನ್ಟೆಡ್ ರಿಯಾಲಿಟಿ ಟೆಕ್ನಾಲಜಿ ಬಳಸಿ ಸಮಿಫಿನಾಲೆ ವೇದಿಕೆಯ ಸಂಚಿಕೆಯನ್ನ ಮತ್ತಷ್ಟು ರೋಚಕವನ್ನಾಗಿ ಮಾಡಲು ಸಜ್ಜಾಗಿದೆ.
ಅಲ್ಲದೆ, ಭಾರತದ ನುರಿತ ತಂತ್ರಜ್ಞರ ಮಾರ್ಗದರ್ಶನದಲ್ಲಿ ತಯಾರಾದ ಈ ಸಂಚಿಕೆಯಲ್ಲಿ ಕುರುಕ್ಷೇತ್ರದಿಂದ ಹಿಡಿದು ರಾಮಾಯಣದ ತನಕ ಎಲ್ಲಾ ಪಾತ್ರಗಳನ್ನ ನೈಜವಾಗಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ವೇದಿಕೆ ಮೇಲೆ ತಂದಿರುವ ಈ ಸಂಚಿಕೆ, ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment