Loading Now

ಬಿಗ್‌ಬಾಸ್‌ ಒಟಿಟಿ ಪ್ರಾರಂಭಕ್ಕೆ ಡೇಟ್‌ ಫಿಕ್ಸ್‌..! ಸ್ಪರ್ಧೆಗಳು ಯಾರು, ಪ್ರಸಾರ ಎಲ್ಲಿ..?

ಬಿಗ್‌ಬಾಸ್‌ ಒಟಿಟಿ ಪ್ರಾರಂಭಕ್ಕೆ ಡೇಟ್‌ ಫಿಕ್ಸ್‌..! ಸ್ಪರ್ಧೆಗಳು ಯಾರು, ಪ್ರಸಾರ ಎಲ್ಲಿ..?

Bigg Boss OTT : ಟಿವಿಗೆ ಮಾತ್ರ ಸೀಮಿತವಾಗಿದ್ದ ಬಿಗ್‌ ಬಾಸ್‌ ಶೋ ಇದೀಗ ಒಟಿಟಿಗೂ ಕಾಲಿಟ್ಟಿರುವ ವಿಚಾರ ಎಲ್ಲಿರಿಗೂ ತಿಳಿದಿದೆ. ಈ ಜನಪ್ರಿಯ ರಿಯಾಲಿಟಿ ಶೋನ ಮುಂದಿನ ಸೀಸನ್‌ ಶೀಘ್ರವೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಹಾಗಿದ್ರೆ, ಬಿಗ್ ಬಾಸ್ 3 ಯಾವಾಗ ಪಾರಂಭವಾಗುತ್ತದೆ, ಯಾವ ಓಟಿಟಿಯಲ್ಲಿ ನೋಡಬಹುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ..

ಹೌದು.. ಬಿಗ್‌ ಬಾಸ್‌ ಅಭಿಮಾನಿಗಳು ಹೊಸ ಸೀಸನ್‌ ಗಾಗಿ ಕಾದು ಕುಳಿತಿದ್ದಾರೆ. ಇತ್ತೀಚಿಗಷ್ಟೇ ಬಿಗ್‌ಬಾಸ್‌ ಟಿವಿಯಲ್ಲಿ ಪ್ರಸಾರವಾದ ಸೀಸನ್‌ ಮುಗಿದಿದೆ. ಇದೀಗ ಒಟಿಟಿಯಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ.

ಬಿಗ್‌ ಬಾಸ್‌ ಒಟಿಟಿ ಕಾರ್ಯಕ್ರಮದ ಪ್ರೀಮಿಯರ್ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು ವೈರಲ್‌ ಆಗುತ್ತಿವೆ. ಬಿಗ್ ಬಾಸ್ ಹಿಂದಿ OTT ಸೀಸನ್ 3 (bigg boss ott season 3) ಶೀಘ್ರದಲ್ಲೇ ಪ್ರಸಾರವಾಗಲಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ಬಿಗ್ ಬಾಸ್‌ ಹಿಂದಿ ಸೀಸನ್ 3 ಮುಂದಿನ ತಿಂಗಳು ಅಂದರೆ ಮೇ ತಿಂಗಳಲ್ಲಿ ಶುರುವಾಗಲಿದೆ ಎನ್ನಲಾಗಿದೆ.

ಪ್ರೀಮಿಯರ್ ದಿನಾಂಕ ಮೇ 15 ಎಂದು ಹೇಳಲಾಗುತ್ತಿದ್ದು, ಬಿಗ್ ಬಾಸ್ ಹಿಂದಿ OTT ಸೀಸನ್ 3 (bigg boss ott season 3) ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಸಧ್ಯ ಬಿಗ್‌ ಬಾಸ್‌ ತಂಡ ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ವದಂತಿಗಳಿವೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed