Loading Now

ನೋವಿನಲ್ಲೂ ನಗು ನಗುತ್ತಲೇ ಯುಗಾದಿ ಆಚರಿಸಿದ ಸೋನು..! ಕ್ಯೂಟ್‌ ಎಂದ ಫ್ಯಾನ್ಸ್‌

ನೋವಿನಲ್ಲೂ ನಗು ನಗುತ್ತಲೇ ಯುಗಾದಿ ಆಚರಿಸಿದ ಸೋನು..! ಕ್ಯೂಟ್‌ ಎಂದ ಫ್ಯಾನ್ಸ್‌

Sonu Gowda Ugadi Celebration: ಬಿಗ್ ಬಾಸ್ ಮಾಜಿ ಸ್ಪರ್ಧಿ, ಸೋಷಿಯಲ್‌ ಮೀಡಿಯಾ ಸ್ಟಾರ್‌ ಸೋನು ಶ್ರೀನಿವಾಸ್‌ ಗೌಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನೋವಿನಲ್ಲೂ ಸಹ ಸಂತೋಷವಾಗಿ ಯುಗಾದಿ ಹಬ್ಬವನ್ನು ಆಚರಿಸಿರುವ ಸೋನು ಅದ್ಧೂರಿಯಾಗಿ ಫೋಟೋಶೂಟ್‌ ಮಾಡಿಸಿದ್ದಾಳೆ.

ಹೌದು.. ರೀಲ್ಸ್ ರಾಣಿ ಸೋನು ಗೌಡ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಬಿಗ್‌ ಬಾಸ್‌ ಓಟಿಟಿ ಪ್ರವೇಶದಿಂದ ಸೋನುಗೆ ಸಖತ್‌ ಕ್ರೇಜ್‌ ದೊರಕಿತು. ಮೊನ್ನೆಯಷ್ಟೇ ಬಾಲಕಿಯೊಂದನ್ನು ದತ್ತು ಪಡೆದ ವಿಚಾರವಾಗಿ ಜೈಲು ಸೇರಿದ್ದ ನಟಿ ಇದೀಗ ಜೈಲಿನಿಂದ ರಿಲೀಸ್‌ ಆಗಿದ್ದಾರೆ.

ಅದ್ಧೂರಿಯಾಗಿ ಯುಗಾದಿ ಹಬ್ಬನ್ನು ಆಚರಿಸಿರುವ ಸೋನು ಶ್ರೀನಿವಾಸ್ ಗೌಡ ಪಿಂಕ್‌ ಆರೆಂಜ್‌ ಮಿಶ್ರಿತ ಸೀರೆಯನ್ನು ಹಾಕಿಕೊಂಡು ಅದಕ್ಕೆ ಗುಲಾಬಿ ಬ್ಲೌಸ್‌ ಧರಿಸಿದ್ದರು. ಹಾಗೆಯೇ ಹೇರ್ ಫ್ರೀಯಾಗಿ ಬಿಟ್ಟುಕೊಂಡು ನೆಕ್ಲೆಸ್ ಧರಿಸಿ, ಝುಮುಕಿ ಹಾಕಿಕೊಂಡಿದ್ದರು. ಹಣೆಗೆ ಸಿಂಪಲ್‌ ಆಗಿ ಸಣ್ಣ ಬೊಟ್ಟು ಇಟ್ಟುಕೊಂಡು ಸುಂದರವಾಗಿ ಕಾಣಿಕೊಂಡಿದ್ದಾರೆ.

ಸೀರೆಯಲ್ಲಿ ಪೋಟೋಶೂಟ್‌ ಮಾಡಿಸಿ ಚಿತ್ರಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳು ಸಹ ದೈರ್ಯವಾಗಿರಿ, ನಗ್ತಾ ಇರಿ ಅಂತ ಸೋನುಗೆ ಹಾರೈಸುತ್ತಿದ್ದಾರೆ. ಇನ್ನು ಈ ಪೋಸ್ಟ್‌ಗೆ ಇಪ್ಪತ್ತೊಂಬತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed