ಕ್ರಿಶ್ಚಿಯನ್ ಆಗಿದ್ದರೂ ತಾಯಿಗಾಗಿ ʼಸಾಯಿ ಬಾಬಾʼ ಮಂದಿರ ಕಟ್ಟಿದ ನಟ ವಿಜಯ್..!
Actor Vijay built temple for his mother : ಟಾಲಿವುಡ್ ಸೂಪರ್ ಸ್ಟಾರ್ ನಟ ವಿಜಯ್ ಸದ್ಯ GOAT ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ರಾಜಕೀಯಕ್ಕೆ ಪ್ರವೇಶ ಮಾಡಿರುವ ನಟ ಸ್ವಃತ ಪಕ್ಷವನ್ನು ಕಟ್ಟಿದ್ದು, ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದಾರೆ. ಸಧ್ಯ ವಿಜಯ್ ತಮ್ಮ ತಾಯಿಗೆ ದೇವಸ್ಥಾನ ಕಟ್ಟಿಸಿದ್ದಾರೆ ಎಂದು ಸುದ್ದಿಯಾಗಿದೆ.
ಹೌದು… ಮೂಲತಃ ಕ್ರಿಶ್ಚಿಯನ್ ಆಗಿದ್ದರೂ ಸಹ ನಟ ವಿಜಯ್, ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ. ಹೆಚ್ಚು ಯಾವುದೇ ದೇವಸ್ಥಾನಕ್ಕೂ ಸಹ ಅವರು ಹೋಗುವವರಲ್ಲ ಅಲ್ಲದೆ, ಯಾವುದೇ ಧರ್ಮವನ್ನು ಅನುಸರಿಸುವವರಲ್ಲ. ಆದರೆ ಇದೀಗ ತಮ್ಮ ತಾಯಿಗಾಗಿ ಸಾಯಿಬಾಬಾ ಗುಡಿಯನ್ನೇ ಕಟ್ಟಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ಫೋಟೋ ವೈರಲ್ ಆಗಿದೆ.
ನಟ ವಿಜಯ್ ತಾಯಿ ಶೋಭಾ (Actor Vijay mother) ಅವರು ಸಾಯಿಬಾಬಾ ಭಕ್ತರು ಎನ್ನಲಾಗಿದೆ. ಅದಕ್ಕಾಗಿ ತಮ್ಮ ತಾಯಿಗಾಗಿ ಚೆನ್ನೈನ ಅಂಬತ್ತೂರು ಪುರಸಭೆ ವ್ಯಾಪ್ತಿಯ ಕೊರತ್ತೂರಿನಲ್ಲಿ ಸಾಯಿಬಾಬಾ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ವಿಜಯ್ ನಿರ್ಮಿಸಿದ್ದಾರೆ ಎನ್ನಲಾದ ದೇಗುಲದ ಕುಂಬಾಭಿಷೇಕ ಫೆಬ್ರವರಿ 11 ರಂದು ಪೂರ್ಣಗೊಂಡಿದೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment