Loading Now

ಒಂದು ರೂ. ಹಣ ಪಡೆಯದೇ ʼರಾಮಾಯಣʼ ಸಿನಿಮಾದಲ್ಲಿ ಯಶ್‌ ನಟನೆ..! ಇದರ ಹಿಂದಿಗೆ ರಹಸ್ಯ ವಿಚಾರ

ಒಂದು ರೂ. ಹಣ ಪಡೆಯದೇ ʼರಾಮಾಯಣʼ ಸಿನಿಮಾದಲ್ಲಿ ಯಶ್‌ ನಟನೆ..! ಇದರ ಹಿಂದಿಗೆ ರಹಸ್ಯ ವಿಚಾರ

Yash in Ramayana movie : ಕೆಜಿಎಫ್‌ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ನಟ ರಾಕಿಂಗ್‌ ಸ್ಟಾರ್‌ ಯಶ್ ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸಧ್ಯ ರಾಕಿಭಾಯ್‌ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.. ಅಲ್ಲದೆ ಈ ಸಿನಿಮಾದಲ್ಲಿ ನಟಿಸಲು ರಾಕಿ ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ.

ಹೌದು.. ರಾಕಿಂಗ್‌ ಸ್ಟಾರ್‌ ಯಶ್‌ ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾ ನಂತರ ಸಾಕಷ್ಟು ಗ್ಯಾಪ್‌ ತೆಗೆದುಕೊಂಡಿರುವ ನಟ ಇದೀಗ ಟಾಕ್ಸಿಕ್‌ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.

ಅಲ್ಲದೆ, ಯಶ್‌ ನಿತೇಶ್ ತಿವಾರಿ ನಿರ್ದೇಶನದ ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾದಲ್ಲಿ ಯಶ್‌ ದಶಕಂಠ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈ ಚಿತ್ರದಲ್ಲಿ ನಟಿಸಲು ಯಶ್‌ ಸಂಭಾವನೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಅವರು ಬೇರೆಯದೇ ರೀತಿಯ ಡೀಲ್ ಮಾಡಿಕೊಂಡಿದ್ದಾರಂತೆ. ಯಸ್‌.. ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆಯುತ್ತಿರುವ ನಟ ಈ ಸಿನಿಮಾಗೆ ನಿರ್ಮಾಪಕರಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಅಧಿಕೃತವಾಗಿಲ್ಲ.

ಮೊದಲು ರಾಮಾಯಣ ಸಿನಿಮಾಗಾಗಿ ಯಶ್ 80 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ, ಇದಕ್ಕೆ ನಿರ್ಮಾಪಕರೂ ಸಹ ಒಪ್ಪಿಗೆ ನೀಡಿದ್ದರು. ಅದರೆ ಯಶ್ ಸಂಭಾವನೆ ಬದಲು ಆ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಸಿನಿಮಾ ಹಿಟ್‌ ಆದ್ರೆ ಇದಕ್ಕಿಂತ ಡಬಲ್‌ ಹಣ ಯಶ್‌ಗೆ ಸೇರೋದು ಖಚಿತ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed