Loading Now

Pushpa 2 teaser : ʼಪುಷ್ಪಾ 2ʼ ಟೀಸರ್‌ ಔಟ್‌ : ಅಲ್ಲು ಅರ್ಜುನ್‌ ನ್ಯೂ ಲುಕ್‌ಗೆ ಫ್ಯಾನ್ಸ್‌ ಫಿದಾ

Pushpa 2 teaser : ʼಪುಷ್ಪಾ 2ʼ ಟೀಸರ್‌ ಔಟ್‌ : ಅಲ್ಲು ಅರ್ಜುನ್‌ ನ್ಯೂ ಲುಕ್‌ಗೆ ಫ್ಯಾನ್ಸ್‌ ಫಿದಾ

Pushpa 2 The Rule Teaser : ತೆಲುಗು ಸ್ಟಾರ್‌ ಡೈರೆಕ್ಟರ್‌ ಸುಕುಮಾರ್ ನಿರ್ದೇಶನದ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಪುಷ್ಪ 2 ದಿ ರೂಲ್ʼ. ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ʼಪುಷ್ಪ 2 ದಿ ರೂಲ್‌ʼ ಚಿತ್ರದ ಟೀಸರ್ ಬಿಡುಗಡೆಮಾಡಿದೆ.

ಹೌದು.. ಪುಷ್ಪ 2 ದಿ ರೂಲ್ ಟೀಸರ್ (Pushpa 2 The Rule Teaser) ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ವೃತ್ತಿಜೀವನದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಫುಲ್ ಫಾರ್ಮ್‌ನಲ್ಲಿ ಮಿಂಚಿದ್ದಾರೆ. ಸುಕುಮಾರ್ ನಿರ್ದೇಶನದ ‘ಪುಷ್ಪ’ ದಿ ರೈಸ್‌ನ ಮೊದಲ ಭಾಗ ಸೂಪರ್‌ ಹಿಟ್ ಆಗಿತ್ತು. ಇದೀದ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ 2 ತೆರೆಗೆ ಅಪ್ಪಳಿಸಲು ರೆಡಿಯಾಗಿದೆ

ಕಳೆದ ವರ್ಷ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಫಸ್ಟ್‌ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಬನ್ನಿ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ 2 (Pushpa 2 The Rule Teaser) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಅಲ್ಲದೆ ಬನ್ನಿ ಹೊಸ ಅವತಾರ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಪುಷ್ಪ ರಾಜ್ ಪಾತ್ರದ ಮೂಲಕ ಅಲ್ಲು ಅರ್ಜುನ್‌ ಮತ್ತೊಮ್ಮೆ ತಮ್ಮ ವಿಶ್ವರೂಪವನ್ನು ತೋರಿಸಲಿದ್ದಾರೆ. ಅಲ್ಲದೆ, ಇತ್ತೀಚಿಗೆ ರಿಲೀಸ್‌ ಆದ ರಶ್ಮಿಕಾ ಮಂದಣ್ಣ (Rashmika mandanna) ಲುಕ್‌ ಸಹ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಇದರಿಂದಾಗಿ ಈ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇವೆ.

ಇನ್ನು ಈ ಚಿತ್ರದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ (Allu Arjun) ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿ ಪಡೆದ ತೆಲುಗಿನ ಮೊದಲ ನಾಯಕ ಎಂಬ ದಾಖಲೆ ಬನ್ನಿ ನಿರ್ಮಿಸಿದ್ದಾರೆ. ಇನ್ನು ಪುಷ್ಪಾ ದಿ ರೂಲ್‌ ಈ ವರ್ಷ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ತೆಲುಗು ಸೇರಿದಂತೆ ಭಾರತದಾದ್ಯಂತ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.

Share this content:

Post Comment

You May Have Missed