Loading Now

ಹಳ್ಳಿಕಾರ್‌ ಒಡೆಯ ವರ್ತೂರ್‌ ಸಂತೋಷ್‌ ಯಾರು, ಅವರ ಆಸ್ತಿ ಎಷ್ಟಿದೆ ಗೊತ್ತೆ..?

ಹಳ್ಳಿಕಾರ್‌ ಒಡೆಯ ವರ್ತೂರ್‌ ಸಂತೋಷ್‌ ಯಾರು, ಅವರ ಆಸ್ತಿ ಎಷ್ಟಿದೆ ಗೊತ್ತೆ..?

Varthur Santosh Life story : ವರ್ತೂರು ಸಂತೋಷ್‌ ಹಳ್ಳಿಕಾರ್‌ ತಳಿ ಮೂಲಕ ಗುರುತಿಸಿಕೊಂಡವರು. ತದನಂತರ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟು ಕರ್ನಾಟಕದಾದ್ಯಂತ ಮನೆ ಮಾತಾದರು. ಅಲ್ಲದೆ, ದೊಡ್ಮನೆಯಲ್ಲಿ ತಮ್ಮ ಆಟದ ಶೈಲಿಯಿಂದ ಸಾಕಷ್ಟು ಜನ ಅಭಿಮಾನಿಗಳನ್ನು ಗಳಿಸಿದ್ದಾರೆ..

ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ನೇರ ಮಾತುಗಳಿಂದ ಸಂತೋಷ್‌ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ತುಕಾಲಿ ಸಂತೋಷ ಆಪ್ತ ಸ್ನೇಹಿತರಾಗಿ ಇಬ್ಬರು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡಿದರು. ಸಧ್ಯ ಸೋಷಿಯಲ್‌ ಮೀಡಿಯಾ ಒಪನ್‌ ಮಾಡಿದ್ರೆ ಸಾಕು ಎಲ್ಲಾ ಕಡೆ ವರ್ತೂರ್‌ ಹವಾ ಜೋರಾಗಿದೆ.. ಹಾಗಿದ್ರೆ ಈ ವರ್ತೂರ್‌ ಸಂತೋಷ್‌ ಯಾರು.. ಅವರ ಆಸ್ತಿ ಎಷ್ಟಿದೆ.. ಹಿನ್ನೆಲೆ.. ಎನು ಅಂತ ತಿಳಿಯೋಣ ಬನ್ನಿ..

ಹಳ್ಳಿಕಾರ್‌ ಒಡೆಯ ಎಂದೇ ಫೇಮಸ್‌ ಆಗಿರುವ ವರ್ತೂರು ಸಂತೋಷ್‌ ಅವರ ಬಳಿ 38 ಎಕರೆ ಜಮೀನು ಇದೆ. MBA ಪದವಿಯನ್ನು ಓದಲು ಬಯಸಿದ್ದ ಸಂತೋಷ್‌ ಕಾರಣಾಂತರಗಳಿಂದ ಅರ್ಧದಲ್ಲೇ ಕಾಲೇಜ್‌ ಡ್ರಾಪ್‌ಔಟ್‌ ಮಾಡಿದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ವರ್ತೂರು ಸಂತೋಷ್‌ ಅವರ ಬಳಿ ಮೊದಲು 15 ಎಕರೆ ಜಮೀನಿ ಇತ್ತಂತೆ.

ಇನ್ನು ಕೋಟಿ ಬೆಲೆ ಬಾಳುವ ಮನೆಯಲ್ಲಿ ವಾಸಿಸುವ ಇವರ ಬಳಿ, ಬರೋಬ್ಬರಿ 400 ಗ್ರಾಂ ಚಿನ್ನಾಭರಣವಿದೆ ಎಂದು ಹೇಳಲಾಗುತ್ತದೆ ಆದರೆ ಇದು ಅಧಿಕೃತವಲ್ಲ. ಸದ್ಯ ಒಬ್ಬ ರೈತನಾಗಿ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ವರ್ತೂರ್‌ ಸಂತೋಷ್‌ ಉತ್ತಮ ಉದಾರಣೆಯಾಗಿದ್ದಾರೆ. ಇನ್ನು ಸಂತೋಷ್‌ ಅವರು ತನಿಷಾ ಅವರನ್ನು ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿದೆ. ಆದರೆ ಇದು ಸುಳ್ಳು ವದಂತಿ ಅಂತ ಹೇಳಲಾಗುತ್ತಿದೆ.

Share this content:

Post Comment

You May Have Missed