ಕಾಂತಾರ 2 ಸಿನಿಮಾದಿಂದ ಸಪ್ತಮಿಗೌಡ ಔಟ್..! ಈ ಬಾಲಿವುಡ್ ನಟಿಯೇ ನಾಯಕಿ
Kantara 2 : ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’. ಬಿಡುಗಡೆಯಾದ ಮೊದಲ ದಿನದಿಂದ ಚಿತ್ರಮಂದಿರವನ್ನು ದೇವಸ್ಥಾನವಾಗಿಸಿದ ಕನ್ನಡ ಸಿನಿಮಾ. ಇದೀಗ ಈ ಚಿತ್ರದಿಂದ ಬಿಗ್ ಅಪ್ ಡೇಟ್ ಹೊರಬಿದ್ದಿದೆ.
ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡದ ಸಿನಿಮಾ. ಈ ಚಿತ್ರದ ಜನಪ್ರಿಯತೆಯನ್ನು ಕಂಡು ಪರಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಸದ್ಯ ಈ ಕಥೆಯ ಪ್ರೀಕ್ವೆಲ್ ಸೆಟ್ಟೇರಿದ್ದು ತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯ ಈ ಚಿತ್ರದಿಂದ ನಟಿ ಸಪ್ತಮಿಗೌಡ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿದ ಬರುತ್ತಿದೆ.
ಹೌದು… ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಲಿರುವ, ಹೊಂಬಾಳೆ ಫಿಲ್ಮ್ಸ್ ‘ ನಿರ್ಮಾಣದ ಕಾಂತಾರ ಭಾಗ 2 ರ ಪೋಸ್ಟರ್ ರಿಲೀಸ್ ಆಗಿ ಈಗಾಗಲೇ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇದೇ ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ನಾಯಕಿಯ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿಬಂದಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕಾಂತಾರ ಸಿನಿಮಾಗೆ ನಟಿ ಸಾಯಿ ಪಲ್ಲವಿ ಇಲ್ಲವೇ ಆಲಿಯಾ ಭಟ್ ಅವರನ್ನು ಕರೆತರಲು ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದ್ದು.. ಇದರಿಂದಾಗಿ ನಟಿ ಸಪ್ತಮಿ ಗೌಡ ಈ ಚಿತ್ರದಿಂದ ಹೊರ ಬಿದ್ದಿದ್ದಾರೆ ಎನ್ನುವ ಮಾಹಿತಿ ಇದೆ.
Share this content:
Post Comment