ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ..! ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು
Shivaraj KR Pete : ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮೇಲೆ ಮಹಿಳೆಯೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಕುರಿತು ದೂರು ದಾಖಲಾಗಿದೆ. ನೋಂದ ಮಹಿಳೆ ಬೆಂಗಳೂರಿನ ಸುಬ್ರಮಣ್ಯನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಶಿವರಾಜ್ ಕೆಆರ್ ಪೇಟೆ ವಿರುದ್ದ ಶಾರದಾ ಬಾಯಿ ಎಂಬ ಮಹಿಳೆ ದೂರನ್ನು ದಾಖಲಿಸಿದ್ದಾರೆ. ಕಳೆದ ತಿಂಗಳು 30 ರಂದು ರಾಜ್ ಕುಮಾರ್ ರಸ್ತೆಯ 10 ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಕಾರ್ ಟಚ್ ಮಾಡಿದ್ದಲ್ಲದೇ ಯಾವಳೇ ನೀನು… ಅಂತಾ ಅವಾಚ್ಯ ಶಬ್ದದಿಂದ ಶಿವರಾಜ್ (Shivaraj KR Pete) ಬೈದಿದ್ದಾಗಿ ಮಹಿಳೆ ಆರೋಪ ಮಾಡಿದ್ದಾಳೆ.
ಮಾರ್ಚ್ 30ರ ರಾತ್ರಿ 9.15 ರಿಂದ 9.30ರ ಸಮಯದಲ್ಲಿ ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ಬಳಿ, ಪಟ್ರೋಲ್ ಬಂಕ್ ಹತ್ತಿರ ನನ್ನ ವಾಹನಕ್ಕೆ ಟಚ್ ಮಾಡಿದ್ದಲ್ಲದೇ, ಕಾರಿನ ಗ್ಲಾಸ್ ಇಳಿಸಿ ಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತೀಯಾ ಅಂತ ನಿಂದನೆಯ ಶಬ್ದದಿಂದ ಮಾತನಾಡಿದರು ಎಂದು ಶಾರದಾ ಬಾಯಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಶಿವರಾಜ್ ಕೆ.ಆರ್ ಪೇಟೆ ಮತ್ತು ಆತನ ಗೆಳೆಯರು ನನಗೆ ಅವಮಾನ ಮಾಡಿದ್ದಾರೆ. ಅವರನ್ನು ಠಾಣೆಗೆ ಕರೆಯಿಸಿ ಸೂಕ್ತ ಕ್ರಮ ತಗೆದುಕೊಳ್ಳುವಂತೆ ದೂರುದಾರ ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಇನ್ನು ಮಹಿಳೆಯ ದೂರಿನನ್ವಯ ಎನ್ಸಿಆರ್ ಪ್ರಕರಣ ದಾಖಲಿಸಿಕೊಂಡು ಶಿವರಾಜ್ ಕೆ.ಆರ್. ಪೇಟೆಯಲ್ಲಿ ಠಾಣೆಗೆ ಕರೆಹಿಸಿ, ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Share this content:
Post Comment