ರಾಜಕೀಯಕ್ಕೆ ನಟಿ ಅನುಷ್ಕಾ ಶೆಟ್ಟಿ ಎಂಟ್ರಿ..! ಪಕ್ಷ ಯಾವುದು ಗೊತ್ತೆ..?
Anushka Shetty Political entry : ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ವಿವಿಧ ಪಕ್ಷಗಳು ಪ್ರಭಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಸ್ಟಾರ್ ನಟ-ನಟಿಯರ ಮೇಲೆ ರಾಜಕೀಯ ನಾಯಕರ ದೃಷ್ಟಿ ನೆಟ್ಟಿದೆ. ಇದೆ ವೇಳೆ ನಟಿ ಅನುಷ್ಕಾ ಶೆಟ್ಟಿಗೆ ರಾಜಕೀಯ ಪಕ್ಷದಿಂದ ಬಿಗ್ ಆಫರ್ ಒಂದು ಬಂದಿದೆ.
ಹೌದು… ದೇಶದ ಕಣ್ಣು ಇದೀಗ ಆಂಧ್ರಪ್ರದೇಶದ ರಾಜಕೀಯದ ಮೇಲಿದೆ. ಕಾರಣ ಇಲ್ಲಿ ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ಪಕ್ಷಗಳ ಮೈತ್ರಿ ಹೇಗಾದರೂ ಮಾಡಿ ವೈಎಸ್ಆರ್ಸಿಪಿ ಪಕ್ಷವನ್ನು ಬಗ್ಗು ಬಡಿಯಲು ಒಂದಾಗಿವೆ.. ಇದರಿಂದಾಗಿ ಲೋಕಸಭಾ ಚುನಾವಣೆ ಸೆಂಟರ್ ಆಟ್ರ್ಯಾಕ್ಷನ್ ಆಗಿ ಅಂಧ್ರ ಚುನಾವಣೆ ಹೊರಹೊಮ್ಮಿದೆ.. ಇದರ ನಡುವೆ ನಟಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಟಾಲಿವುಡ್ ಸ್ಟಾರ್, ಕರಾವಳಿ ಬೆಡಗರಿ ನಟಿ ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶಕ್ಕೆ ಹಾದಿ ಸಿದ್ಧವಾಗಿದೆ. ಕನ್ನಡತಿ ಅನುಷ್ಕಾ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಮೂಲಕ ರಾಜಕೀಯದ ಅಖಾಡಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿ ಅನುಷ್ಕಾ ಶೆಟ್ಟಿ ಪವನ್ ಕಲ್ಯಾಣ್ ಸ್ಥಾಪಿತ ಜನಸೇನಾ ಪಕ್ಷದಿಂದ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಆದರೆ ಚಿತ್ತೂರು ಜಿಲ್ಲೆಯಿಂದ ಸಚಿವೆ, ನಟಿ ರೋಜಾ ಎದಿರು ಸ್ಪರ್ಧಿಸಲು ಅನುಷ್ಕಾ ಅವರನ್ನು ಕಣಕ್ಕಿಳಿಸಲು ಜನಸೇನೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
Share this content:
Post Comment