Loading Now

ಟೆರರಿಸ್ಟ್​ಗಳು ಮುಸ್ಲಿಮರಲ್ಲ..! ದಿ ಕೇರಳ ಸ್ಟೋರಿ ನಟಿಯ ಹೇಳಿಕೆ ವೈರಲ್‌

ಟೆರರಿಸ್ಟ್​ಗಳು ಮುಸ್ಲಿಮರಲ್ಲ..! ದಿ ಕೇರಳ ಸ್ಟೋರಿ ನಟಿಯ ಹೇಳಿಕೆ ವೈರಲ್‌

Adah Sharma : ದಿ ಕೇರಳ ಸ್ಟೋರಿ ಖ್ಯಾತಿಯ ನಟಿ ಅದಾ ಶರ್ಮಾ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಟೆರರಿಸ್ಟ್​ಗಳು ವಿಲನ್​ಗಳು ಆದರೆ ಅವರು ಮುಸ್ಲಿಮರಲ್ಲ ಎಂದು ಹೇಳಿರುವ ನಟಿಯ ಮಾತು ಭಾರೀ ಚರ್ಚೆ ಸೃಷ್ಟಿಸಿದೆ. ಅಲ್ಲದೆ, ಪರ ಹಾಗೂ ವಿರೋಧ ವ್ಯಕ್ತವಾಗುತ್ತಿವೆ..

ಹೌದು.. ಕೆಲವು ದಿನಗಳ ಹಿಂದೆ ಬಾಬಾ ಸಿದ್ದಿಕ್ (Baba Siddique) ಆಯೋಜನೆ ಮಾಡಿದ್ದ ಇಫ್ತಾರ್ ಕೂಟದಲ್ಲಿ ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ, ಮುನಾವರ್ ಫರುಕಿ, ಪ್ರೀತಿ ಜಿಂಟಾ, ಪ್ರಿಯಾಂಕಾ ಚಹರ್ ಚೌಧರಿ ಮತ್ತು ಶೆಹನಾಜ್ ಗಿಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಈ ಈವೆಂಟ್‌ನಲ್ಲಿ ನಟಿ ಅದಾ ಶರ್ಮಾ ಕಾಣಿಸಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ ಕೆಲವು ನೆಟ್ಟಿಗರು ಈ ಕುರಿತ ವಿಡಿಯೋ ಹಂಚಿಕೊಂಡು ವಿರೋಧ ವ್ಯಕ್ತಪಡಿಸಿದ್ದರು. ಈ ಪೈಕಿ ವಿಡಿಯೋ ಒಂದಕ್ಕೆ ಉತ್ತರ ನೀಡಿರುವ ನಟಿ, ತಮ್ಮ ಎಕ್ಸ್‌ ಖಾತೆಯಲ್ಲಿ, ʼಭಯೋತ್ಪಾದಕರು ವಿಲನ್‌ಗಳೇ ಹೊರತು ಮುಸ್ಲಿಮರಲ್ಲʼ (Terrorists are villains not Muslims) ಎಂದು ಸ್ಪಷ್ಟನೆ ನೀಡಿದ್ದಾರೆ.

ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ಅವಸ್ಥೆಯ ಕಥಾಹಂದರ ಹೊಂದಿರುವ ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ಅದಾ ನಟಿಸಿದ್ದರು. ಈ ಚಿತ್ರದ ವಿರುದ್ಧ ಮುಸ್ಲಿಂ ವಿರೋಧಿ ಪ್ರಚಾರ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಸಾಕಷ್ಟು ವಿವಾದವನ್ನು ಸಹ ಈ ಸಿನಿಮಾ ಹುಟ್ಟುಹಾಕಿತು.

ಇನ್ನು 2023 ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸಹ ನಟಿಸಿದ್ದಾರೆ. ಈ ಸಿನಿಮಾ ವಿರೋಧದ ನಡವೆಯೂ ಉತ್ತಮ ಪ್ರದರ್ಶನ ಕಂಡಿತ್ತು.

Share this content:

Post Comment

You May Have Missed