Loading Now

ಸ್ಕೂಲ್‌ನಲ್ಲಿ ಇದ್ದಾಗಲೇ ಆ ಕೆಲಸ ಮಾಡಿ, ಸಿಕ್ಕಿ ಬಿದ್ದಿದ್ರಂತೆ ಸಾಯಿ ಪಲ್ಲವಿ..!

ಸ್ಕೂಲ್‌ನಲ್ಲಿ ಇದ್ದಾಗಲೇ ಆ ಕೆಲಸ ಮಾಡಿ, ಸಿಕ್ಕಿ ಬಿದ್ದಿದ್ರಂತೆ ಸಾಯಿ ಪಲ್ಲವಿ..!

Sai Pallavi love letter : ಸಾಯಿ ಪಲ್ಲವಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಡಾನ್ಸರ್‌ ಆಗಿ ಕೇರಿಯರ್‌ ಸ್ಟಾರ್ಟ್‌ ಮಾಡಿದ ಪಲ್ಲವಿ, ಇದೀಗ ಬಿಗ್‌ ಸ್ಟಾರ್‌ ಆಗಿ ಮಿಂಚುತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಯಿ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ಶೀರ್ಘ್ರದಲ್ಲೇ ನಟಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಇದೀಗ ಸಾಯಿ ತಮ್ಮ ಬಾಲ್ಯದ ದಿನಗಳ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುವಾಗ, ಚೈಲ್ಡ್‌ವುಡ್‌ ಲವ್‌ ಬಗ್ಗೆ ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಸಹಪಾಠಿಯೊಬ್ಬರಿಗೆ ಸಾಯಿ ಪಲ್ಲವಿ ಲವ್‌ ಲೆಟರ್‌ ಬರೆದಿದ್ದರಂತೆ. ಆದರೆ ತಪ್ಪಾಗಿ ಆ ಪ್ರೇಮ ಪತ್ರ ಅವನ ತಂದೆ ತಾಯಿಗೆ ಸಿಕ್ಕಿತು. ಆಗ ಆತನಿಗೆ ಅವರ ಅಪ್ಪ ತೀವ್ರವಾಗಿ ಥಳಿಸಿದ್ದರು. ಈ ಘಟನೆಯ ನಂತರ ನಾನು ಮತ್ತೆ ಅಂತಹ ತಪ್ಪನ್ನು ಮಾಡಿಲ್ಲ ಅಂತ ನಟಿ ಹೇಳಿಕೊಂಡಿದ್ದಾರೆ.

ಇನ್ನು ಮೇಕಪ್ ಇಲ್ಲದೆಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅಷ್ಟೆ ಅಲ್ಲದೆ, ಇತ್ತೀಚಿಗೆ ಅವರು ಜಾಹೀರಾತು ಒಂದರಲ್ಲಿ ನಟಿಸಲು ಸುಮಾರು 2 ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

Share this content:

Post Comment

You May Have Missed