ಯಶ್-ರಾಧಿಕಾ ಪರ್ಸನಲ್ ಫೋಟೋಗ್ರಾಫರ್ ಯಾರು ಗೊತ್ತೆ..? ಇಲ್ಲಿದ್ದಾರೆ ನೋಡಿ..
Yash daughter Ayra : ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ದಂಪತಿ, ಮುದ್ದಾದ ಎರಡು ಮಕ್ಕಳ ಜೊತೆ ಲೈಫ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ಮಕ್ಕಳ ಜೊತೆ ಟ್ರಿಪ್ ಹೋಗುವ ರಾಕಿಭಾಯ್ ಈ ಕುರಿತ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳ ಹಿಂದೆ ಮಕ್ಕಳ ವೆಕೇಷನ್ಗೆ ತೆರಳಿದ್ದರು. ಈ ವೇಳೆ ಕಡಲತೀರದಲ್ಲಿ ತೆಗೆದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಮುದ್ದಾದ ಜೋಡಿ ಫೋಟೋಸ್ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ವಿಶೇಷ ಅಂದ್ರೆ ರಾಧಿಕಾ ಪಂಡಿತ್ ಹಾಗೂ ಯಶ್ ಫೋಟೋಗಳನ್ನು ಐರಾ ಕ್ಲಿಕ್ ಮಾಡಿದ್ದು. ಅಮ್ಮ ಪೋಸ್ ಕೊಡ್ತಿದ್ರೆ ಮಗಳು ಕ್ಲಿಕ್ ಮಾಡುತ್ತಿರುವ ಫೋಟೊ ಸಹ ವೈರಲ್ ಆಗಿದೆ..
ಅಷ್ಟೆ ಅಲ್ಲ, ಅಪ್ಪ ಅಮ್ಮನನ್ನು ಒಟ್ಟಿಗೆ ನಿಲ್ಲಿಸಿ ಐರಾ ಫೋಟೋ ಕ್ಲಿಕ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕ್ಯೂಟ್ ಅಂತ ಕಾಮೆಂಟ್ ಮಾಡಿದ್ದಾರೆ. ಈ ಫೋಟೊ ಹಂಚಿಕೊಂಡಿರುವ ರಾಧಿಕಾ ʼಇವರೇ ನೋಡಿ ನಮ್ಮ ನ್ಯೂ ಪರ್ಸನಲ್ ಫೋಟೋಗ್ರಾಫರ್ʼ ಅಂತ ಶೀರ್ಷಿಕೆ ಬರೆದುಕೊಂಡಿದ್ದಾರೆ.
Share this content:
Post Comment