Loading Now

ʼಕಾಂತಾರʼ ಸ್ಟೈಲ್‌ನಲ್ಲಿ ಜೂ. ಎನ್‌ಟಿಆರ್‌..! ʼದೇವರʼ ಸಿನಿಮಾ ಕಥೆ ಅದೇನಾ..?

ʼಕಾಂತಾರʼ ಸ್ಟೈಲ್‌ನಲ್ಲಿ ಜೂ. ಎನ್‌ಟಿಆರ್‌..! ʼದೇವರʼ ಸಿನಿಮಾ ಕಥೆ ಅದೇನಾ..?

NTR Devara movie : ಜೂ. ಏನ್‌ಟಿಆರ್‌ ಸಿನಿಮಾದಿಂದ ಇಂದು ಬಿಡುಗಡೆಯಾದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಅಲ್ಲದೆ, ಎನ್‌ಟಿಆರ್‌ ಲುಕ್‌ ನೋಡಿದ ನೆಟ್ಟಿಗರು ಈ ಮುಖನಾ ಎಲ್ಲೋ ನೋಡಿದ್ದೀನಿ ಅಂತ ಟ್ರೋಲ್‌ ಮಾಡುತ್ತಿದ್ದಾರೆ..

ಹೌದು.. ಬಹುನಿರೀಕ್ಷಿತ ಸಿನಿಮಾ ದೇವರ ಚಿತ್ರದ ಬಗ್ಗೆ ಒಂದಿಲ್ಲೊಂದು ಅಪ್​ಡೇಟ್ ಸಿಗುತ್ತಲೇ ಇದೆ. ಇದೀಗ ಈ ಸಿನಿಮಾದಿಂದ ಹೊಸ ಅಪ್‌ಡೇಟ್‌ ಒಂದು ರಿಲೀಸ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಎನ್‌ಟಿಆರ್‌ ಲುಕ್‌ ನೋಡಿ ಎಲ್ಲರೂ ಕಾಂತಾರ ಸಿನಿಮಾ ನೆನೆಪು ಮಾಡಿಕೊಳ್ಳುತ್ತಿದ್ದಾರೆ..

ಸಧ್ಯ ದೇವರ ಸಿನಿಮಾದ ಶೂಟಿಂಗ್‌ ಗೋವಾದಲ್ಲಿ ನಡೆಯುತ್ತಿದೆ.. ಇದೇ ವೇಳೆ ಶೂಟಿಂಗ್‌ ಸೆಟ್‌ನಿಂದ ಎನ್‌ಟಿಆರ್‌ ಲುಕ್‌ ಒಂದು ಲೀಕ್‌ ಆಗಿದೆ.. ಆ ಫೋಟೋದಲ್ಲಿ ತಾರಕ್‌ ನೋಡೋಕೆ ಥೇಟ್‌ ಕಾಂತಾರ ಸಿನಿಮಾದಲ್ಲಿನ (ಶಿವ) ರಿಷಬ್‌ ಶೆಟ್ಟಿ ರೀತಿ ಕಾಣುತ್ತಿದ್ದಾರೆ..

ಸಧ್ಯ ರಿಷಬ್‌ ಶೆಟ್ಟಿ ಮತ್ತು ಎನ್‌ಟಿಆರ್‌ ಫೋಟೋ ಬಳಸಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಅಂದಹಾಗೆ, ನಿರ್ದೇಶಕ ಕೊರಟಾಲ ಶಿವ ದೇವರ: ಚಾಪ್ಟರ್ 1ಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸುಂದರಂ ಮಾಸ್ಟರ್‌ ಈ ಸಿನಿಮಾದ ಹಾಡೊಂದಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಈ ಸಿನಿಮಾ ನಂತರ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಲಿದ್ದಾರೆ. ಇದು ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಎನ್ನಲಾಗಿದೆ. ಪ್ರಥಮ ಬಾರಿಗೆ ಹಿಂದಿ ಸಿನಿಮಾದಲ್ಲಿ ಎನ್‌ಟಿಆರ್‌ ನಟಿಸುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

Share this content:

Post Comment

You May Have Missed