ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ ನಟಿ ಜಾನ್ವಿ..! ವಿಡಿಯೋ ವೈರಲ್
Jahnavi Kapoor Tirumala Visit : ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಜೊತೆ ಶಿಖರ್ ಪಹಾಡಿಯಾ ಮತ್ತು ಓರಿ ಇದ್ದರು. ಇನ್ನು ಜಾನ್ವಿ ಮೊಣಕಾಲಿನಲ್ಲೇ ಬೆಟ್ಟವನ್ನು ಹತ್ತಿದ್ದು, ಈ ಕುರಿತು ವಿಡಿಯೋ ವೈರಲ್ ಆಗಿದೆ..
ಈ ಕುರಿತು ಓರಿ ಅಕಾ ಓರ್ಹಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಜಾನ್ವಿ ತಿರುಪತಿ ಮೊಣಕಾಲಿನಲ್ಲೆ ಮೆಟ್ಟಿಲನ್ನು ಹತ್ತಿರುವ ದೃಶ್ಯವಿದೆ. ಇದನ್ನೂ ನೋಡಿದ ಅವರ ಅಭಿಮಾನಿಗಳು ನಟಿಯ ಭಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.
ಇನ್ನು ವೀಡಿಯೊದಲ್ಲಿ ಜಾನ್ವಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಪನ್ ಕೂದಲು ಬಿಟ್ಟುಕೊಂಡು ದೇವರ ದರ್ಶನ ಪಡೆದಿದ್ದಾರೆ. ಸಧ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ರೀದೇವಿ ಮಗಳ ದೈವ ಭಕ್ತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Share this content:
Post Comment