ಮಾತ್ರೆ ನುಂಗಿ ಅತ್ಮಹತ್ಯೆಗೆ ಯತ್ನಿಸಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ..! ನಟಿಯ ಬಾಳಲ್ಲಿ ದುರಂತ
Comedy Khiladigalu Nayana: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಯನಾ ತಮ್ಮ ಜೀವನದಲ್ಲಾದ ದುರಂತ ಘಟನೆಯೊಂದು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ನಾನು ಗರ್ಭಿಣಿ ಅಂತ ಕನ್ಫರ್ಮ್ ಮಾಡಿಕೊಳ್ಳುವ ಎರಡು ಮೂರು ದಿನ ಮುಂಚೆ ಬದುಕಬಾರದು ಸತ್ತು ಹೋಗಬೇಕು ಎಂದು ನಿರ್ಧರಿಸಿದ್ದೆ. ಏಕೆಂದರೆ ಇದಕ್ಕೂ ಮೊದಲು ನನಗೆ ಎರಡು ಬಾರಿ ಅಬಾರ್ಷನ್ ಆಗಿತ್ತು. ಇದರಿಂದಾಗಿ ಸಾಯ್ಬೇಕು ಅಂತ ನಿರ್ಧರಿಸಿದ್ದೆ ಎಂದರು.
ಯಾರಿಗೂ ನನ್ನ ಹೆಣ ಕೂಡ ಸಿಗಬಾರದು ಹಾಗೆ ಸಾಯಬೇಕು ಅಂತ ನಿರ್ಧಾರ ಮಾಡಿದ್ದೆ. ಆಗ ನಾನು ಮತ್ತೆ ಪ್ರೆಗ್ನೆಂಟ್ ಅಂತ ಗೊತ್ತಾಯ್ತು. ಆದ್ರೆ ನಾನು ಸಾಯ್ಬೇಕು ಅಂತ ಆಗಲೇ ಮಾತ್ರೆ ನುಂಗಿದ್ದೆ. ಆ ದೇವರು ನನ್ನ ಮತ್ತು ನನ್ನ ಮಗಳನ್ನು ಬದುಕಿಸಿ ಬಿಟ್ಟ.
ಆಸ್ಪತ್ರೆಗೆ ಹೋದಾಗ ಡಾಕ್ಟರ್ ನಿಮ್ಮ ಮಗು ಹಾರ್ಟ್ ಬೀಟ್ ಕೇಳಿ ಅಂತ ಕೇಳಿಸಿದ್ರು. ಅಗ ನನ್ನ ಮಗು ಉಳಿಸಿಕೊಳ್ಳಬೇಕು ಆ ಜೀವ ಉಳಿಯಬೇಕು ಅಂತ ನಿರ್ಧಾರ ಮಾಡಿದೆ. ಮೊದಲಿನಂತೆ ಎಲ್ಲರನ್ನು ನಗಿಸಬೇಕು ಅಂದ ಗಟ್ಟಿ ಧೈರ್ಯ ಮಾಡಿದೆ ಅಂತ ತಮ್ಮ ಜೀವನದಲ್ಲಾದ ನೋವನ್ನು ತೊಡಿಕೊಂಡಿದ್ದಾರೆ.
Share this content:
Post Comment