Loading Now

ನಟ ಸಿದ್ಧಾರ್ಥ್‌ ಮೇಲೆ ವಿಮಾನದಲ್ಲಿ ಹಲ್ಲೆ..! ವಿಡಿಯೋ ವೈರಲ್‌

ನಟ ಸಿದ್ಧಾರ್ಥ್‌ ಮೇಲೆ ವಿಮಾನದಲ್ಲಿ ಹಲ್ಲೆ..! ವಿಡಿಯೋ ವೈರಲ್‌

Attack on Sidharth Malhotra : ಬಾಲಿವುಡ್‌ ಸ್ಟಾರ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮೇಲೆ ವಿಮಾನದ ಟಾಯ್ಲೆಟ್‌ ರೂಮ್‌ನಲ್ಲಿ ಹಲ್ಲೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ..

ಬಿಟೌನ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ನಟನೆಯ ʼಯೋಧʼ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಟಾಯ್ಲೆಟ್​ ರೂಮ್‌ನಲ್ಲಿ ಸಿದ್ದಾರ್ಥ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ವಿಮಾನದ ಶೌಚಾಲಯದಲ್ಲಿ ಸಿದ್ದಾರ್ಥ್ ಮೇಲೆ ಕೆಲವರು ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನು ನೋಡಿ ಅವರ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಆದ್ರೆ ಈ ವಿಡಿಯೋ ಹಿಂದಿರುವ ಅಸಲಿಯುತ್ತು ಬೇರೆನೇ ಇದೆ.. ಇದು ‘ಯೋಧ’ ಸಿನಿಮಾದ ಒಂದು ದೃಶ್ಯ ಎಂದು ತಿಳಿದು ಬಂದಿದೆ. ಸ್ವತಃ ಸಿದ್ದಾರ್ಥ್ ಅವರೇ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ‘ನಾನು ಈ ಹಿಂದೆ ಹಲವು ಸಾಹಸ ದೃಶ್ಯಗಳಲ್ಲಿ ನಟಿಸಿದ್ದೇನೆ. ಆದರೆ ಮೊದಲ ಬಾರಿಗೆ ಟಾಯ್ಲೆಟ್‌ ರೂಮ್‌ನಲ್ಲಿ ಸಾಹಸ ದೃಶ್ಯವನ್ನು ಶೂಟ್ ಮಾಡಿದ್ದೇನೆ. ಎದುರಿಗಿದ್ದ ವ್ಯಕ್ತಿ ತುಂಬಾ ಎತ್ತರವಾಗಿದ್ದ. ಹಾಗಾಗಿ ಈ ದೃಶ್ಯ ಶೂಟ್ ಮಾಡಲು ಕಷ್ಟಪಡುತ್ತಿದ್ದೆ ಅಂತ ಹೇಳಿಕೊಂಡಿದ್ದಾರೆ. ವಿಡಿಯೋ ಸಧ್ಯ ವೈರಲ್‌ ಆಗುತ್ತಿದೆ.

Share this content:

Post Comment

You May Have Missed