ಆಸ್ಪತ್ರೆ ದಾಖಲಾಗಿರವ ಅಮಿತಾಬ್ ಜೀಗೆ ಶಸ್ತ್ರಚಿಕಿತ್ಸೆ..! ಏನಾಗಿದೆ ʼಬಿಗ್ ಬಿʼಗೆ..?
Amitabh Bachchan Hospitalised : ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರನ್ನು ಶಸ್ತ್ರಚಿಕಿತ್ಸೆಗಾಗಿ ಅನಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು.. ಅಮಿತಾಬ್ ಅವರನ್ನು ಆಂಜಿಯೋಪ್ಲ್ಯಾಸಿ ಶಸ್ತ್ರಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಸಾಮಾನ್ಯವಾಗಿ ಹೃದಯದ ಅಪಧಮನಿಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ರಕ್ತ ಹೆಪ್ಪುಗಟ್ಟಿದಾಗ ಈ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದು ಹೃದಯದ ಅಪಧಮನಿಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಿಂದ ಹೃದಯಕ್ಕೆ ರಕ್ತದ ಹರಿವನ್ನು ತಡೆಯುತ್ತದೆ. ಅಡೆತಡೆಗಳನ್ನು ತಡೆಗಟ್ಟಲು ಶಸ್ತ್ರಚಿಕಿತ್ಸೆಯನ್ನು ಮೊದಲೇ ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯ ಮೂಲಕ, ಭವಿಷ್ಯದಲ್ಲಿ ಹೃದಯಾಘಾತವನ್ನು ತಡೆಗಟ್ಟಬಹುದು. 70 ಕ್ಕಿಂತ ಹೆಚ್ಚು ಅಪಧಮನಿಗಳು ಸ್ಟಕ್ ಆದಾಗ ವೈದ್ಯರು ಸಾಮಾನ್ಯವಾಗಿ ಆಂಜಿಯೋಪ್ಲ್ಯಾಸ್ಟಿಯನ್ನು ಶಿಫಾರಸು ಮಾಡುತ್ತಾರೆ.
Share this content:
Post Comment