Vinay Gowda : ಅನು ಅಕ್ಕ ಅಳುವಂತೆ ಮಾಡಿದ ಟ್ರೋಲಿಗರಿಗೆ ಬಿಗ್‌ಬಾಸ್ ಆನೆ ವಿನಯ್ ವಾರ್ನಿಂಗ್..!
Vinay Gowda on Anu akka : ಇತ್ತೀಚಿಗೆ ಜನಪ್ರಿಯ ವಾಹಿನಿ ಜೀ ಕನ್ನಡ ಸಮಾಜ ಸೇವಕಿ ಅನು ಅಕ್ಕ ಅವರಿಗೆ ಜೀ ಸ್ತ್ರೀ ಅವಾರ್ಡ್ ನೀಡಿ ಗೌರವಿಸಿತು. ಇದರ ಬೆನ್ನಲ್ಲೆ ಅವರು ಸೋಷಿಯಲ್ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದಕ್ಕೆ ಬಿಗ್ ಬಾಸ್ 10 ರ ಸ್ಪರ್ಧಿ ವಿನಯ್ ಗೌಡ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಅನು ಅಕ್ಕ ಅವರನ್ನು ಖಾಸಗಿಯಾಗಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ತೀವ್ರ ನೋವನ್ನು ಅನುಭವಿಸಿರುವ ಅವರು, ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಧ್ಯ ಅನು ಅಕ್ಕ ಪರ ಧ್ವನಿ ಎತ್ತಿರುವ ವಿನಯ್, ನೋಡಿ ಅನು ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಾಲ ಸೂಲ ಮಾಡಿ ಕೆಲವೊಂದು ಬಾರಿ ಅನಾರೋಗ್ಯದ ನಡುವೆಯೂ ನಮ್ಮ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡುತ್ತಿದ್ದಾರೆ. ಅವರ ವಿಚಾರವಾಗಿ ಫೇಕ್ ಪ್ರೊಫೈಲ್ ಇಟ್ಟುಕೊಂಡು ಟ್ರೋಲ್ ಮಾಡೋದು, ಅಸಭ್ಯವಾಗಿ ಮಾತನಾಡೋದ್ರಿಂದ ಎನ್ ಸಿಗುತ್ತೆ ನಿಮ್ಗೆ..
ನೀವು ಮಾಡೋ ಕೆಲಸ ನಿಮ್ಗೆ ಸರಿ ಅನಿಸುತ್ತಾ ನೋಡಿ.. ನಿಮ್ಮ ಅಕ್ಕತಂಗಿಗೆ ಈ ರೀತಿ ಆದ್ರೆ ಸರಿ ಅನಿಸುತ್ತಾ, ಫೇಕ್ ಪ್ರೊಫೈಲ್ ಇಟ್ಕೊಂಡು ಈ ರೀತಿ ಮಾಡೋದ್ರಿಂದ ಎನ್ ಬರುತ್ತಿವೆ. ನಮಗೂ ಅಮ್ಮ, ಅಕ್ಕ ಅನ್ನೋಕೆ ಬರುತ್ತೆ, ಆದ್ರೆ ಅದು ಸರಿಯಲ್ಲ. ಅನು ನನ್ನ ತಂಗಿ, ಅವಳನ್ನ ಮನಸಾರೆ ತಂಗಿಯಂತ ಸ್ವೀಕಾರ ಮಾಡಿದೀನಿ, ಅವರ ತಂಟೆಗೆ ಬರೋಕೆ ಹೋಗ್ಬೇಡಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ ವಿನಯ್.
ಅನು ಅಕ್ಕ ತಮ್ಮ ಇನ್ಟಾಗ್ರಾಮ್‌ನಲ್ಲಿ, ಕರ್ನಾಟದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ನಡೆಯುವಂತ ಅವಾಚ್ಯ ಟ್ರೋಲ್ ಗಳು ಹಾಗೂ ಪೇಡ್ ಪ್ರಮೋಷನ್ ಟ್ರೋಲ್ ಗಳು ಬ್ಯಾನ್ ಆಗಬೇಕು ಏಕಾಏಕಿಯಾಗಿ ಯಾರ್ ಬೇಕ್ ಅವರ ಬಗ್ಗೆ ತುಚ್ಛವಾಗಿ ಬಿಂಬಿಸಿ ಮರ್ಯಾದೆ ಹತ್ಯೆಯಾಗುವಂತ ಪ್ರಕರಣಗಳು ನಿಲ್ಲಬೇಕು. ಇದೆ ಮುಂದುವರೆದರೆ ನಿಜ ಸ್ವಹತ್ಯೆಗಳು ಆಗುವುದು ಖಂಡಿತ.ಅಪರಿತ ವ್ಯಕ್ತಿಗಳು ಯಾರೊಬ್ಬರ ಬಗ್ಗೆ ತಿಳಿಯದೆ ಅವರ ಬಗ್ಗೆ ತುಚ್ಛವಾಗಿ ಮಾತಾಡುವಂತ ಹಾಗೂ ಬಿಂಬಿಸುವಂತ ಪ್ರಕರಣಗಳು ಶೀಘ್ರದಲ್ಲೇ ಬ್ಯಾನ್ ಆಗಬೇಕು ಅಂತ ವಿಡಿಯೋ ಮೂಲಕ ಒತ್ತಾಯಿಸಿದ್ದಾರೆ.
Share this content:
Post Comment