Loading Now

ನಟಿ ಪ್ರೇಮಾ ಸಿನಿಮಾ ಶೂಟಿಂಗ್‌ ವೇಳೆ ಅವಘಡ : ಹಾವು ಕಚ್ಚಿ ವ್ಯಕ್ತಿ ಸಾವು

ನಟಿ ಪ್ರೇಮಾ ಸಿನಿಮಾ ಶೂಟಿಂಗ್‌ ವೇಳೆ ಅವಘಡ : ಹಾವು ಕಚ್ಚಿ ವ್ಯಕ್ತಿ ಸಾವು

Actress Prema : ಸಾಕಷ್ಟು ಸಿನಿಮಾಗಳಲ್ಲಿ ಗ್ರಾಫಿಕ್ಸ್‌ ಹಾವುಗಳನ್ನು ಬಳಸಲಾಗುತ್ತದೆ. ಅದರೆ ಕೆಲವು ದೃಶ್ಯಗಳಲ್ಲಿ ನಿಜವಾದ ಹಾವುಗಳನ್ನು ಬಳಸಬೇಕಾಗುತ್ತದೆ. ಹೀಗೆ ಸಿನಿಮಾವೊಂದರಲ್ಲಿ ಬಳಸಿದ ನಿಜವಾದ ಹಾವು ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿರವ ಘಟನೆ ಜರುಗಿದೆ. ಈ ಕುರಿತು ಸ್ವತಃ ಸ್ಯಾಂಡಲ್‌ವುಡ್‌ ನಟಿ ಪ್ರೇಮಾ ತಿಳಿಸಿದ್ದಾರೆ..

ನಟಿ ಪ್ರೇಮಾ ಕನ್ನಡ ಚಿತ್ರರಂಗದ ಖ್ಯಾತ ನಟಿ. 90ರ ದಶಕದಲ್ಲಿ ಈ ನಟಿಗೆ ಬಹುಬೇಡಿಕೆ ಇತ್ತು. ಕನ್ನಡವಷ್ಟೇ ಅಲ್ಲದೆ, ತೆಲುಗು ಚಿತ್ರರಂಗದಲ್ಲಿಯೂ ನಟಿ ಸಕ್ರಿಯವಾಗಿದ್ದರು. ಈ ವೇಳೆ ನಡೆದ ಘಟನೆಯೊಂದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ‘ದೇವಿ’ ಸಿನಿಮಾ ಬಿಡುಗಡೆಯಾಗಿ ಸುಮಾರು 25 ವರ್ಷಗಳಾಗಿವೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಮಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಲನಚಿತ್ರವು 12 ಮಾರ್ಚ್ 1999 ರಂದು ಬಿಡುಗಡೆಯಾಯಿತು.

ದೇವಿ ಸಿನಿಮಾದ ಶೂಟಿಂಗ್‌ ವೇಳೆ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ. ಸಾಕಷ್ಟು ಶ್ರಮದ ನಂತರ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಅದ್ಭುತ ಪ್ರತಿಫಲ ಸಿಕ್ಕಾಗ ಆ ಕಷ್ಟಗಳನ್ನೆಲ್ಲ ಮರೆತುಬಿಟ್ಟೆವು ಅಂತ ಪ್ರೇಮಾ ತಿಳಿಸಿದ್ದಾರೆ.

Share this content:

Post Comment

You May Have Missed