Salman Khan : ಸಲ್ಮಾನ್ ಖಾನ್ ಹಂದಿ ಹಾಗೆ ತಿಂತಾನೆ..! ನಟ ವಿಂದು ಹೇಳಿಕೆ ವೈರಲ್
Vindu Dara Singh on Salman Khan : ಬಿಟೌನ್ ಟೈಗರ್, ಭಾಯಿಜಾನ್ ನಟ ಸಲ್ಮಾನ್ ಕುರಿತು ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
ಹೌದು.. ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ನಟ ವಿಂದು ದಾರಾ ಸಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ, ಸಲ್ಮಾನ್ ಖಾನ್ ಕುರಿತ ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಭಾಯಿಜಾನ್ ಜೀವನಶೈಲಿ ಕುರಿತು ಹೇಳಿರುವ ವಿಂದು ಅವರ ಫಿಟ್ನೆಸ್ ಬಗ್ಗೆ ಕುತೂಹಲಕಾರಿ ಮಾಹಿತಿ ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಹಂದಿಯಂತೆ ತಿನ್ನುತ್ತಾನೆ ಮತ್ತು ನಾಯಿಯಂತೆ ವ್ಯಾಯಾಮ ಮಾಡುತ್ತಾನೆ ಅಂತ ಹೇಳಿರುವ ವಿಂದು ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿವೆ. ಸಲ್ಲು ಭಾಯ್ ಎಷ್ಟು ತಿನ್ನುತ್ತಾರೋ ಅಷ್ಟು ಕಸರತ್ತು ನಡೆಸುತ್ತಾರೆ ಅಂತ ವಿಂದು ಹೇಳಿದ್ದಾರೆ.
ಇನ್ನು ಸಲ್ಲು ಕುರಿತು ಮಾತು ಮುಂದುವರೆಸಿದ ವಿಂದು, ಒಮ್ಮೆ ನಾನು ‘ಭಾಯ್, ನೀವು ತಿನ್ನುವ ಆಹಾರವೆಲ್ಲ ಎಲ್ಲಿಗೆ ಹೋಗುತ್ತೆ?’ ಅಂತ ಪ್ರಶ್ನೆ ಮಾಡಿದೆ. ಅದಕ್ಕೆ ಅವನು ಅದನ್ನು ಸುಡುತ್ತೇನೆ ಅಂತ ಉತ್ತರ ಕೊಟ್ಟರು ಅಂತ ಹೇಳಿದರು. ದಿನಪೂರ್ತಿ ತಿಂದು ಸಂಜೆ ಜಿಮ್ನಲ್ಲಿ ಎಲ್ಲವನ್ನು ಕರಗಿಸುತ್ತಾರೆ ಭಾಯ್.
ಅಲ್ಲದೆ, ಸಲ್ಮಾನ್ ಸರಳತೆ ಬಗ್ಗೆ ಮಾತನಾಡಿದ ದಾರಾ ಸಿಂಗ್, ಸಲ್ಮಾನ್ ಇಂದಿಗೂ ತನ್ನ ತಂದೆಯಿಂದ ಪಾಕೆಟ್ ಮನಿ ತೆಗೆದುಕೊಳ್ಳುತ್ತಾರೆ ಅಂತ ಹೇಳಿದ್ರು. ಅಲ್ಲದೆ, 50,000 ರಿಂದ 1 ಲಕ್ಷ ರೂಪಾಯಿಗಳನ್ನು ಬಡವರಿಗೆ ದಾನ ಮಾಡುತ್ತಾರೆ ಅಂತ ತಿಳಿಸಿದರು. ಅಲ್ಲದೆ, ಸಲ್ಲು ಅದ್ಭುತ ಮತ್ತು ಸಹಾಯಕ ವ್ಯಕ್ತಿ ಅಂತ ಹೇಳಿದರು.
Share this content:
Post Comment