ತುಂಡು ಬಟ್ಟೆ ಹಾಕ್ಬೇಕು, ನಿನ್ನ ತೊಡೆ ತೋರಿಸು ಅಂತಾರೆ..! ಖ್ಯಾತ ನಟಿ ಶಾಕಿಂಗ್ ಹೇಳಿಕೆ
Aamani on casting couch : ಇತ್ತೀಚಿನ ದಿನಗಳಲ್ಲಿ ಅನೇಕ ಸ್ಟಾರ್ ನಟ- ನಟಿಯರು ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇದೀಗ ತೆಲುಗು ನಟಿಯೊಬ್ಬರು ಸಿನಿ ಜಗತ್ತಿನ ಕರಾಳತೆಯನ್ನು ಬಿಚ್ಚಿಟ್ಟಿದ್ದು, ಭಯಾನಕವಾಗಿದೆ.
ಹೌದು.. ಸಿನಿರಂಗಲದಲ್ಲಿ ಕಾಸ್ಟಿಂಗ್ ಕೌಚ್ ಇಂದಿಗೂ ನಡೆಯುತ್ತಿದೆ. ಅನೇಕ ನಟಿಯರು ಈ ಕುರಿತು ಧೈರ್ಯವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೀಗ ಈ ಸಾಲಿಗೆ ತೆಲುಗು ನಟ ಆಮಾನಿ ಸೇರಿಕೊಂಡಿದ್ದಾರೆ. ಅಮಾನಿ ಟಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರು. ಅವರು ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.
ಹೊಸ ಪ್ರೊಡಕ್ಷನ್ ಹೌಸ್’ಗಳಿಂದ ನನಗೆ ಕರೆಗಳು ಬರುತ್ತಿದ್ದವು. ಅಲ್ಲದೆ, ಅವರು ತಮ್ಮನ್ನು ಗೆಸ್ಟ್ ಹೌಸ್‌ಗೆ ಒಂಟಿಯಾಗಿ ಬರುವಂತೆ ಹೇಳುತ್ತಿದ್ದರು. ಅವರ ಉದ್ದೇಶಗಳನ್ನು ತಕ್ಷಣವೇ ಅರ್ಥಮಾಡಿಕೊಂಡು ನಾನು ಅವರಿಂದ ದೂರ ಸರಿಯುತ್ತಿದ್ದೆ ಅಂತ ನಟಿ ಅಮಾನಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಅಲ್ಲದೆ, ಹೊಸ ಕಂಪನಿಗಳಿಂದ ಈ ರೀತಿಯ ಕರೆಗಳು ಬರುತ್ತಿದ್ದವು. ಆದರೆ ಪ್ರತಿಷ್ಠಿತ, ಅನುಭವಿ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗಳು ಇಂತಹ ಕೆಲಸವನ್ನು ಮಾಡುತ್ತಿರಲಿಲ್ಲ ಅಂತ ನಟಿ ಹೇಳಿದ್ದಾರೆ. ಇನ್ನೊಂದು ಶಾಕಿಂಗ್ ಸುದ್ದಿ ಅಂದ್ರೆ, ಟು ಪೀಸ್ ಬಟ್ಟೆ ಹಾಕಬೇಕು. ತೊಡೆ ಮೇಲೆ ಮಾರ್ಕ್ ಇದ್ಯಾ. ಒಮ್ಮೆ ತೋರಿಸಿ ಎನ್ನುತ್ತಾರೆ ಅಮಾನಿ ಹೇಳಿದ್ದಾರೆ.
Share this content:
Post Comment