ʻಮ್ಯಾಕ್ಸ್ʼ ಬಿಗ್ ಅಪ್‌ಡೇಟ್ ಔಟ್..! ಇದು ಕಿಚ್ಚನ ಫ್ಯಾನ್ಸ್ ಖುಷಿ ಪಡೋ ಸುದ್ದಿ
Max Movie Update : ಅಭಿನಯ ಚಕ್ರವತಿ ಕಿಚ್ಚ ಸುದೀಪ್ ಮುಂಬರುವ ಸಿನಿಮಾ ಮ್ಯಾಕ್ಸ್. ತನ್ನ ಪೋಸ್ಟರ್ ನಿಂದಲೇ ಕುತೂಹಲ ಮೂಡಿಸಿರುವ ಸಿನಿಮಾದಿಂದ ಇದೀಗ ಬಿಗ್ ಅಪ್‌ಡೇಟ್ ಒಂದು ಹೊರಬಿದ್ದಿದೆ. ಅದೇನು ಅಂತ ತಿಳಿಯೋಕೆ ಕಾತುರರಾಗಿದ್ದರೆ.. ಮುಂದೆ ಓದಿ..
ಹೌದು.. ನಟ ಕಿಚ್ಚ ಸುದೀಪ್ ತಮ್ಮ ಮುಂಬರುವ ಸಿನಿಮಾ ಮ್ಯಾಕ್ಸ್ ಕುರಿತು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಕ್ಸ್ ಸಿನಿಮಾದ ಅಪ್‌ಡೇಟ್ಸ್‌ಗಾಗಿ ಕಾಯುತ್ತಿದ್ದವರಿಗೆ ಸಮಾಧಾನ ನೀಡಿದೆ.
ಪೋಸ್ಟ್‌ನಲ್ಲಿ ಕಿಚ್ಚ ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದೇವೆ. ಪ್ರಮುಖ ಘಟ್ಟ ಜೊತೆಗೆ ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಮುಗಿದಂತೆ. ಎಲ್ಲ ರಫ್ ಕಟ್ ದೃಶ್ಯಗಳನ್ನು ನೋಡಿದೆ. ಸೂಪರ್… ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಪ್ರತಿಯೊಬ್ಬರ ಎಫರ್ಟ್ ಕಾಣುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾದ್‌ಶಾ ಸುದೀಪ್ ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಶೂಟಿಂಗ್ ಕೂಡ ಮುಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದು, ಇನ್ನೇನು ಕೆಲವು ದಿನಗಳಲ್ಲಿ ಮ್ಯಾಕ್ಸ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿಯಲಿದೆ.
ಇನ್ನು ಚಿತ್ರತಂಡ ಪ್ಲಾನ್ ಮಾಡಿದಂತೆ ತಿಂಗಳಲ್ಲೇ ಸಿನಿಮಾವನ್ನು ರಿಲೀಸ್ ಮಾಡಲು ಶ್ರಮ ವಹಿಸುತ್ತಿದೆ. ಮ್ಯಾಕ್ಸ್ ಕೆಲಸ ಮುಗಿಯುತ್ತಿದಂತೆ ಬಹುಶಃ ಅನೂಪ್ ಭಂಡಾರಿ ಚಿತ್ರದಲ್ಲಿ ಮತ್ತೊಮ್ಮೆ ಸುದೀಪ್ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚನ ಅಪ್‌ಡೇಟ್‌ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ..
Share this content:
Post Comment