Kannappa Movie: ‘ಕಣ್ಣಪ್ಪ’ ಚಿತ್ರದ ಹೊಸ ಲುಕ್ ಔಟ್..! ಕುತೂಹಲ ಕೆರಳಿಸಿದ ಮಂಚು ವಿಷ್ಣು ಸಿನಿಮಾ
ಶಿವರಾತ್ರಿ ಹಬ್ಬದ ಪ್ರಯುಕ್ತ ಕಣ್ಣಪ್ಪ ಚಿತ್ರದ ಹೊಸ ಲುಕ್ ರಿಲೀಸ್ ಆಗಿದೆ. ಕಣ್ಣಪ್ಪನ ಅವತಾರದಲ್ಲಿ ಬಿಲ್ಲು ಬಾಣ ಹಿಡಿದ ಭಂಗಿಯಲ್ಲಿ ಚಿತ್ರದ ಮೊದಲ ನೋಟ ಹೊರಬಿದ್ದಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.
‘ಕಣ್ಣಪ್ಪ; ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಸಿನಿಮಾ ಘೋಷಣೆ ಆದಾಗಿನಿಂದ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಹುತಾರಾಗಣವೂ ಚಿತ್ರದ ಹೈಲೈಟ್. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಕುತೂಹಲ ಮೂಡಿಸಿತ್ತು. ಈಗ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮತ್ತೊಂದು ಹೊಸ ಲುಕ್ ಹೊರತಂದಿದೆ ಚಿತ್ರತಂಡ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ತಮ್ಮ ಲುಕ್ ಮೂಲಕವೇ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚು ಹರಿಸಿದ್ದಾರೆ. ಬೆರಗುಗೊಳಿಸುವ ದೃಶ್ಯದಲ್ಲಿ, ಬಿಲ್ಲು ಮತ್ತು ಬಾಣದೊಂದಿಗೆ ಕಣ್ಣಪ್ಪನಾಗಿ ವಿಷ್ಣು ಮಂಚು ಎದುರಾಗಿದ್ದಾರೆ. ಜಲಪಾತದಿಂದ ಹೊರಹೊಮ್ಮುತ್ತ, ಇಟ್ಟ ಗುರಿಯತ್ತ ಬಾಣ ನೆಟ್ಟಿದ್ದಾನೆ ಕಣ್ಣಪ್ಪ. ಭಕ್ತಿಪ್ರಧಾನದ ಜತೆಗೆ ಆಕ್ಷನ್- ಪ್ಯಾಕ್ಡ್ ಸೀಕ್ವೆನ್ಸ್‌ಗಳೂ ಚಿತ್ರದಲ್ಲಿ ಭರ್ಜರಿಯಾಗಿ ಇರಲಿದೆ ಎಂಬುದನ್ನು ಸದ್ಯದ ಕಿರು ಝಲಕ್‌ನಲ್ಲಿ ಕಾಣಬಹುದಾಗಿದೆ.
24 ಫ್ರೇಮ್ಸ್ ಫ್ಯಾಕ್ಟರಿ ಮತ್ತು AVA ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಬಹುತೇಕ ವಿದೇಶದಲ್ಲಿಯೇ ಶೂಟಿಂಗ್ ಮಾಡಿಕೊಳ್ಳುತ್ತಿದೆ. ನ್ಯೂಜಿಲೆಂಡ್‌ನ ಸುಂದರ ವಾತಾವರಣದಲ್ಲಿ ಭರ್ಜರಿಯಾಗಿಯೇ ಈ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಈ ಶೂಟಿಂಗ್‌ಲ್ಲಿ 600 ಮಂದಿ ಭಾಗವಹಿಸಿದ್ದು ವಿಶೇಷ. ಈಗ ಇದೇ ಕಣ್ಣಪ್ಪ ತಂಡದಿಂದ ಶಿವರಾತ್ರಿಗೆ ಬಿಗ್ ಸರ್ಪ್ರೈಸ್ ಹೊರಬಂದಿದೆ.
Share this content:
Post Comment