Loading Now

‘ಜೈ ಹನುಮಾನ್​’ ಅಪ್ ಡೇಟ್ : ಮಹೇಶ್ ಬಾಬು ‘ರಾಮ’, ಚಿರಂಜೀವಿ ‘ಹನುಮ’

‘ಜೈ ಹನುಮಾನ್​’ ಅಪ್ ಡೇಟ್ : ಮಹೇಶ್ ಬಾಬು ‘ರಾಮ’, ಚಿರಂಜೀವಿ ‘ಹನುಮ’

ʼಹನುಮಾನ್ʼ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್‌ ಪ್ರದರ್ಶನ ಕಂಡಿದೆ. ಇದರ ಮುಂದುವರೆದ ಭಾಗ ಜೈ ಹನುಮಾನ್ ಚಿತ್ರ 2025 ರಲ್ಲಿ ಬಿಡುಗಡೆಯಾಗಲಿದೆ. ಸಧ್ಯ ಈ ಚಿತ್ರದ ಕುರಿತು ಬಿಗ್‌ ಅಪಡೇಟ್‌ ಹೊರಬಿದ್ದಿದೆ..

ಸಂಕ್ರಾಂತಿ ಹಬ್ಬದಂದು ತೆರೆಕಂಡ ʼಹನುಮಾನ್ʼ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್‌ ಪ್ರದರ್ಶನ ಕಂಡಿದೆ. ಇದಲ್ಲದೆ, ಈಗಾಗಲೇ ಈ ಚಿತ್ರ ರೂ. 100 ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದೆ. ಈ ಸಿನಿಮಾದ ಮುಂದುವರಿದ ಭಾಗವಾಗಿ ‘ಜೈ ಹನುಮಾನ್’ ಸಿನಿಮಾ ತಯಾರಾಗಲಿದೆ ಎಂದು ಈ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಹೇಳಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ..

ಹೌದು.. ʼಹನುಮಾನʼನಲ್ಲಿ ತ್ರೇತಾಯುಗದಲ್ಲಿ ಹನುಮಂತ ಶ್ರೀರಾಮನಿಗೆ ಯಾವ ಪ್ರತಿಜ್ಞೆ ಮಾಡಿದ..? ರಾಮನಿಗೆ ಮಾರುತಿ ಕೊಟ್ಟ ಭರವಸೆ ಏನೆಂಬುದನ್ನು ʼಜೈ ಹನುಮಾನ್ʼ ಚಿತ್ರದಲ್ಲಿ ಪ್ರಶಾಂತ್ ವರ್ಮ ತೋರಿಸಲಿದ್ದಾರೆ.. ಈ ವಿಚಾರ ಸಿನಿಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದಲ್ಲದೆ, ಜೈ ಹನುಮಾನ್ ಚಿತ್ರ 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ.

ಸಿನಿಮಾದ ಎರಡನೇ ಭಾಗ ಘೋಷಣೆಯಾದಾಗಿನಿಂದ ಈ ಸಿನಿಮಾದಲ್ಲಿ ಶ್ರೀರಾಮ ಮತ್ತು ಹನುಮಂತನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ಅಲ್ಲದೆ, ದೊಡ್ಡ ನಟರ ಸಾರಥ್ಯದಲ್ಲಿ ಈ ಚಿತ್ರ ಬಿಗ್‌ ಬಜೆಟ್‌ ವೆಚ್ಚದಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ.

ಇನ್ನು ಇತ್ತೀಚಿಗೆ ನಿರ್ದೇಶಕ ಪ್ರಶಾಂತ್‌ ವರ್ಮಾ ಸಂದರ್ಶವೊಂದರಲ್ಲಿ, ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿದರೆ ಚೆನ್ನಾಗಿರುತ್ತದೆ ಅಂತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮಹೇಶ್ ಬಾಬು ಶ್ರೀರಾಮನ ಅವರತಾರದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Share this content:

Post Comment

You May Have Missed