ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದೇನೆ ಎಂದ ಜ್ಯೋತಿ ರೈ..! ಸಂಚಲನ ಸೃಷ್ಟಿಸುತ್ತಿದೆ ನಟಿಯ ಪೋಸ್ಟ್
Jyothi Rai : ತೆಲುಗು ಸಿನಿರಂಗದಲ್ಲಿ ಮಿಂಚುತ್ತಿರುವ ಸ್ಯಾಂಡಲ್ವುಡ್ನಲ್ಲಿ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಜ್ಯೋತಿಯವರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳು ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದವು. ಇದೀರ ಬೆನ್ನಲ್ಲೆ ನಟಿ ಸಿಹಿ ಸುದ್ದಿ ನೀಡುವುದಾಗಿ ಹಾಕಿರುವ ಪೋಸ್ಟ್ ಸಂಚಲನ ಸೃಷ್ಟಿಸುತ್ತಿದೆ.
ಹೌದು.. ಜ್ಯೋತಿ ರೈ ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಇದೀಗ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಗ್ಲಾಮರ್ ಪ್ರದರ್ಶನ ಮಾಡುವ ನಟಿ ಸಿನಿಮಾ ನಾಯಕಿಯರಿಗೆ ಪೈಪೋಟಿ ನೀಡುತ್ತಿದ್ದಾರೆ.
ನಟಿ ಜ್ಯೋತಿ ಸೌಂದರ್ಯಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರ ಅಪ್ಡೇಟ್ಸ್ಗಾಗಿಯೇ ಕೆಲವು ನೆಟ್ಟಿಗರು ಕಾಯುತ್ತಿರುತ್ತಾರೆ. ಇತ್ತೀಚಿಗೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದವು. ಆದರೆ ಜ್ಯೋತಿ ಈ ಸುದ್ದಿ ಸುಳ್ಳು ಅಂತ ತಳ್ಳಿಹಾಕಿದ್ದರು. ಅಲ್ಲದೆ, ತಮ್ಮ ಹಾಗು ತಮ್ಮ ಕುಟುಂಬದ ತೇಜೋವಧೆ ನಡೆಯುತ್ತಿದೆ ಅಂತ ಅಸಮಾಧಾನ ಹೊರಹಾಕಿದ್ದರು.
ಇದೇ ವೇಳೆ ಇತ್ತೀಚೆಗೆ ನಟಿ ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ಜ್ಯೋತಿ ರೈ ಪೋಸ್ಟ್ ಹಂಚಿಕೊಂಡಿದ್ದಾರೆ. ನೆಟ್ಟಿಗರು ಜ್ಯೋತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಯುವ ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ ಜ್ಯೋತಿ ರಾಯ್ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದು, ಇಬ್ಬರು ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ಇದೂವರೆಗು ನಟಿ ಎಲ್ಲಿಯೂ ಹೇಳಿಕೊಂಡಿಲ್ಲ. ಸಿಹಿ ಸುದ್ದಿಗಾಗಿ ಸ್ವಲ್ಪ ದಿನ ಕಾಯಲೇಬೇಕು..
Share this content:
Post Comment