ಹೀಟ್ ಸ್ಟ್ರೋಕ್ನಿಂದ ಆಸ್ಪತ್ರೆಗೆ ದಾಖಲಾದ ನಟ ಶಾರುಖ್ ಖಾನ್..! ಆತಂಕಗೊಂಡ ಫ್ಯಾನ್ಸ್
Shah Rukh Khan hospitalised : ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಕಿಂಗ್ ಖಾನ್ ಹೀಟ್ಸ್ಟ್ರೋಕ್ಗೆನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಹೌದು.. IPL 2024 ಕ್ವಾಲಿಫೈಯರ್ 1 ರಲ್ಲಿ ಕೆಕೆಆರ್ ಬೆಂಬಲಿಸಲು ನಿನ್ನೆ ಶಾರುಖ್ ಖಾನ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದರು. ಅಲ್ಲಿನ ತಾಪಮಾನ ಪರಿಣಾಮ ಶಾರುಖ್ ನಿರ್ಜಲಿಕರಣಕ್ಕೆ ಒಳಗಾಗಿದ್ದರು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.
ಇದೀಗ ಕಿಂಗ್ ಖಾನ್ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಟನ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಐಪಿಎಲ್ 2024 ಕ್ವಾಲಿಫೈಯರ್ 1 ರ ಪಂದ್ಯದಲ್ಲಿ ಮಗ ಅಬ್ರಾಮ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಶಾರುಖ್ ಖಾನ್ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದರು.
ಕೆಕೆಆರ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಐಪಿಎಲ್ ಫೈನಲ್ಗೆ (IPL Final) ಲಗ್ಗೆ ಇಟ್ಟಿದೆ..
Share this content:
Post Comment