Loading Now

ರವಿಮಾಮನ ʼಪ್ರೇಮಲೋಕ 2ʼ ಕ್ಕೆ ತಮಿಳು ಸುಂದರಿ ಎಂಟ್ರಿ..! ಯಾರ್‌ ಗೊತ್ತಾ ಈ ಚೆಲುವೆ

ರವಿಮಾಮನ ʼಪ್ರೇಮಲೋಕ 2ʼ ಕ್ಕೆ ತಮಿಳು ಸುಂದರಿ ಎಂಟ್ರಿ..! ಯಾರ್‌ ಗೊತ್ತಾ ಈ ಚೆಲುವೆ

Teju Ashwini in Premaloka 2 : ಕ್ರೇಜಿ ಸ್ಟಾರ್‌ ವಿ. ರವಿಚಂದ್ರನ್ ನಟಿಸಿ ನಿರ್ದೇಶಿಸಿದ್ದ ಪ್ರೇಮಲೋಕ ಸಿನಿಮಾ ಕನ್ನಡ ಸಿನಿ ಜಗತ್ತಿನ ದಂತಕತೆ. ಇದೀಗ ರವಿಮಾಮ ಪ್ರೇಮಲೋಕ 2 ಮೂಲಕ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗಿದ್ದು, ಈ ಚಿತ್ರಕ್ಕೆ ಸಂಬಂಧಿಸಿ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

ಪ್ರೇಮಲೋಕ 2 ಚಿತ್ರದ ಸ್ಕ್ರಿಪ್ಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪ್ರೇಮಲೋಕಕ್ಕೆ ತಮಿಳು ಸುಂದರಿ ತೇಜು ಅಶ್ವಿನಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಡ್ಯಾನ್ಸ್‌ರ್‌ ಮತ್ತು ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿರುವ ತೇಜು ಅಶ್ವಿನಿ ʼಕಲ್ಯಾಣ ಸಮಯಲ್ ಸಧಮ್ʼ (Kalyana Samayal Sadham) ಧಾರಾವಾಹಿಯ ಪಾತ್ರದ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಎನ್ನ ಸೊಲ್ಲ ಪೊಗಿರೈ, ಮೂಂದ್ರಂ ಕಣ್ ಮತ್ತು ಕಾತು ವಾಕುಲಾ ರೆಂದು ಕಾದಲ್ ಚಿತ್ರಗಳ ಮೂಲಕ ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ, ನಟಿ ತೇಜು ಕಳೆದ ಆರು ತಿಂಗಳಿನಿಂದ ಬೆಂಗಳೂರಿನಲ್ಲಿದ್ದು, ಪ್ರೇಮಲೋಕ 2 ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರೇಮಲೋಕ 2ಗೆ ನಟಿಯ ಎಂಟ್ರಿ ಫಿಕ್ಸ್‌ ಆಗಿದ್ದು, ಈ ಕುರಿತು ಅಧಿಕೃತವಾಗಿ ಅನೌನ್ಸ್‌ ಆಗಬೇಕಿದೆ ಅಷ್ಟೇ..

Share this content:

Post Comment

You May Have Missed