ಎಸ್‌ಎಸ್‌ಎಲ್‌ಸಿ ಟಾಪರ್ ಬಾಗಲಕೋಟೆ ಅಂಕಿತಾಗೆ ಅಭಿನಂದನೆ ಸಲ್ಲಿಸಿದ ಧ್ರುವ ಸರ್ಜಾ..!
SSLC topper Ankita Basappa : ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮುಧೋಳ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ್ ರಾಜ್ಯಕ್ಕೆ ಫರ್ಸ್ಟ್ ಬಂದಿದ್ದಾರೆ. 625ಕ್ಕೆ 625 ಅಂಕ ಪಡೆದ ಅಂಕಿತ ಅವರನ್ನು ನಟ ಧ್ರುವ ಸರ್ಜಾ ಅಭಿನಂದಿಸಿದ್ದಾರೆ.
ಹೌದು.. ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಸಾಧಕರನ್ನು ಗೌರವಿಸುವ ಕೆಲಸ ಮಾಡುತ್ತಿರುತ್ತಾರೆ. ಅಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರಹದ ಮೂಲಕ ಹೊಗಳುತ್ತಿರುತ್ತಾರೆ. ಅದರಂತೆ ಇದೀಗ ನಟ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್ ಬಂದ ಬಾಗಲಕೋಟೆ ಅಂಕತಾಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ, 625ಕ್ಕೆ625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರಗೆ ಬಾಗಲಕೋಟೆ ಜಿಲ್ಲೆಯ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾಳ ಸಾಧನೆ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗಲಿದೆ. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಡಿಗೆ ಪ್ರಥಮ ಸ್ಥಾನ ಗಳಿಸಿರುವ ಅಂಕಿತಾ ಕೊಣ್ಣೂರಗೆ ತುಂಬುಹೃದಯದ ಅಭಿನಂದನೆಗಳು. ಜೈ ಆಂಜನೇಯ.. ಅಂತ ಬರೆದುಕೊಂಡಿದ್ದಾರೆ.
Share this content:
Post Comment