ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೆ..? ಇವರೂ ಸಹ ಕನ್ನಡದ ಖ್ಯಾತ ನಟಿ
Achyuth Kumar Wife : ಸ್ಯಾಂಡಲ್ವುಡ್ ನಟ ಅಚ್ಯುತ್ ಕುಮಾರ್ ಇದೀಗ ಸೌತ್ ಭಾಷೆಯ ಎಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಅದ್ಭುತ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಂತೆ ಇವರ ಮಡದಿಯೂ ಸಹ ಕನ್ನಡ ಸಿನಿರಂಗ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ಸಾಧನೆ ಮತ್ತು ಹೆಸರು ಗಳಿಸಿದ್ದಾರೆ.
ಅಚ್ಯತ್ ಕುಮಾರ್ (8 March 1966) ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ, ಬೆಳೆದದ್ದು ತಿಪಟೂರಿನಲ್ಲಿ. ಕಲ್ಪತರು ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿರುವ ಇವರು ನಿನಾಸಂ ನಲ್ಲಿ ನಟನಾ ತರಬೇತಿ ಪಡೆದರು, ಸಧ್ಯ ಕನ್ನಡ, ತಮಿಳು ಸಿನಿರಂಗಲದಲ್ಲಿ ನಿರತರಾಗಿದ್ದಾರೆ.
ನಟ ಅಚ್ಯುತ್ ಕುಮಾರ್ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಕೆಜಿಎಫ್, ಕಾಂತಾರದಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ ಅಚ್ಯುತ್. ಮೂರು ಫಿಲ್ಮ್ಫೇರ್, ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ತಲಾ ಒಂದು ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ನಟ ವಿಭಾಗಗಳ ಪ್ರಶಸ್ತಿ ಗೌರವಕ್ಕೆ ಅಚ್ಯುತ್ ಅವರು ಪಾತ್ರರಾಗಿದ್ದಾರೆ.
ಅಚ್ಯುತ್ ಕುಮಾರ್ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.. ನಟ ಅಚ್ಯುತ್ ಕುಮಾರ್ ಅವರು ನಂದಿನಿ (Nandini Patwardhan) ಎಂಬುವವರನ್ನು ಮದುವೆಯಾಗಿದ್ದಾರೆ. ನಂದಿನಿ ಅವರು ಪ್ರಸಿದ್ದ ನಟಿ, ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ನಂದಿನಿಯವರು ಮಂಥನ, ಮೂಡಲಮನೆ ಧಾರಾವಾಹಿ ಮೂಲಕ ಜನಪ್ರೀಯತೆ ಪಡೆದರು. ಇತ್ತೀಚಿಗೆ ಗುರುದೇವ ಹೊಸ್ಸಳ ಸಿನಿಮಾದಲ್ಲಿ ಡಾಲಿ ದನಂಜಯ್ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Share this content:
Post Comment