ಖ್ಯಾತ ನಟ ಸಾಯಿಧರಮ್ ತೇಜ್ ಮೇಲೆ ಮದ್ಯ ಬಾಟಲಿಯಿಂದ ದಾಳಿ..! ತೀವ್ರ ರಕ್ತಸ್ರಾವ, ಕಣ್ಣಿಗೆ ಗಾಯ
Attack on Sai Dharam tej : ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಪರ ಪ್ರಚಾರ ನಡೆಸುತ್ತಿದ್ದ ಚಿತ್ರನಟ ಸಾಯಿ ಧರಮ್ ತೇಜ್ ಅವರ ಮೇಲೆ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಕಾಕನಾಡದ ಪಿಠಾಪುರ ಕ್ಷೇತ್ರದ ತಾಟಿಪರ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾಯಿ ಧರಂ ತೇಜ್ ಸ್ವಲ್ಪದರಲ್ಲೇ ಭಾರಿ ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯಿಂದ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಇದು ವೈಸಿಪಿ ಸ್ಥಳೀಯ ನಾಯಕರ ಕೆಲಸವಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ಸಹ ಸಾಯಿಧರಮ್ ತೇಜ್ ರೋಡ್ ಶೋ ಅಂಗವಾಗಿ ತಾಟಿಪರ್ತಿಯಿಂದ ಚಿನ್ನ ಜಗ್ಗಂಪೇಟೆಗೆ ತೆರಳುತ್ತಿದ್ದಾಗ ವೈಸಿಪಿ ಕಾರ್ಯಕರ್ತರು ಪ್ರಚೋದನಾಕಾರಿ ಕೃತ್ಯ ಎಸಗಿದ್ದರು ಎನ್ನಲಾಗಿದೆ.
ತಾಟಿಪರ್ತಿ ಗಜ್ಜಲಮ್ಮ ಗುಡಿ ಸೆಂಟರ್ ನಲ್ಲಿ ಪವನ್ ಕಲ್ಯಾಣ್ ಪರ ಸಾಯಿಧರಮ್ ತೇಜ್ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ ಅವರ ಮೇಲೆ ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಸಾಯಿಧರಮ್ ತೇಜ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ.. ಪಕ್ಕದಲ್ಲಿದ್ದ ನಲ್ಲ ಶ್ರೀಧರ್ ಗೆ ದೊಡ್ಡ ಪೆಟ್ಟು ಬಿದ್ದಿದ್ದು, ರಕ್ತಸ್ರಾವ ಉಂಟಾಗಿದೆ. ಅಲ್ಲದೆ ಅವರ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಈ ದಾಳಿಯನ್ನು ಪವನ್ ಕಲ್ಯಾಣ್ ತೀವ್ರವಾಗಿ ಖಂಡಿಸಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ಮೇಲೆ ಪುಂಡನೊಬ್ಬ ಕಲ್ಲು ತೂರಾಟ ನಡೆಸಿದ್ದು ಗೊತ್ತೇ ಇದೆ. ಚುನಾವಣಾ ಪ್ರಚಾರದ ವೇಳೆ ದುಷ್ಕರ್ಮಿಗಳು ಪ್ರಚಾರಕ್ಕೆ ಬಂದವರ ನಡುವೆ ಕಲ್ಲು ತೂರಾಟ ನಡೆಸಿ ಪವನ್ ಅವರನ್ನು ಗಾಯಗೊಳಿಸಲು ಯತ್ನಿಸಿದ್ದರು.
Share this content:
Post Comment