ಈ ಒಂದು ಕಾರಣಕ್ಕೆ ನಾನು ರಾಹುಲ್ ಗಾಂಧಿಯವರ ದೊಡ್ಡ ಅಭಿಮಾನಿ: ಶಿವಣ್ಣ
Shivarajkumar on Rahul Gandhi : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಇದೇ ವೇಳೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಶಿವಣ್ಣ ತಾವು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ ಅಂತ ಹೇಳಿಕೊಂಡರು.
ಹೌದು… ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನಟ ಶಿವ ರಾಜ್ಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಹಾಡಿ ಹೋಗಳಿದ್ದಾರೆ. ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕಾರಣ ಏನು ಎಂಬುವುದನ್ನೂ ಸಹ ತಿಳಿಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ಈ ದಿನ ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಹಾನಾಯಕರ ಜತೆಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್ ಎಂದು. ಯಾವ ಮನುಷ್ಯ ಫಿಟ್ ಆಗಿರುತ್ತಾನೋ ಅವನು ದೇಶದಲ್ಲಿ ಸ್ಟ್ರೀಟ್ ಆಗಿರುತ್ತಾನೆ ಎಂದು ಶಿವಣ್ಣ .
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್ಡೆಟ್ಸ್ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment