Loading Now

ಬಾಲ್ಯ ವಿವಾಹ, ಮರು ಮದುವೆ, ಸಾಕಷ್ಟು ವಿವಾದ ಎದುರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಆಸ್ತಿ ಎಷ್ಟಿದೆ ಗೊತ್ತೆ..?

ಬಾಲ್ಯ ವಿವಾಹ, ಮರು ಮದುವೆ, ಸಾಕಷ್ಟು ವಿವಾದ ಎದುರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಆಸ್ತಿ ಎಷ್ಟಿದೆ ಗೊತ್ತೆ..?

Radhika Kumaraswamy net worth : ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ, ಒಂದು ಕಾಲದ ಟಾಪ್‌ ನಟಿ. 2006 ರಲ್ಲಿ, ಕೇವಲ 20 ವರ್ಷ ತುಂಬಿದ ನಟಿ ರಾಧಿಕಾ ತನಗಿಂತ 27 ವರ್ಷ ಹಿರಿಯರಾದ 47 ವರ್ಷದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾದರು. ಪೋಷಕರ ವಿರೋಧದ ನಡುವೆಯೂ ಅವರು ಮದುವೆಯಾದರು ಎಂಬುದು ಗಮನಾರ್ಹ.

ಹೌದು.. 1986ರಲ್ಲಿ ನಟಿ ರಾಧಿಕಾ ಹುಟ್ಟಿದ ವರ್ಷವೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೊದಲ ಮದುವೆಯಾಗಿತ್ತು. ಅದೇ ರೀತಿ 2000ನೇ ಇಸವಿಯಲ್ಲಿ ರತ್ನಕುಮಾರ್ ರನ್ನು ಎಂಬುವರನ್ನು ಮದುವೆಯಾದ ನಟಿ ರಾಧಿಕಾ ಒಂದೆರಡು ವರ್ಷಗಳಲ್ಲೇ ಅವರಿಂದ ಬೇರ್ಪಟ್ಟರು.

ರಾಧಿಕಾ ತಂದೆಗೆ ಮಗಳು ಹೆಚ್.ಡಿ.ಕುಮಾರಸ್ವಾಮಿ ಜೊತೆ ಮದುವೆ ಮಾಡುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ ರಾಧಿಕಾ ಅವರು ತಮ್ಮ ಪೋಷಕರ ವಿರುದ್ಧದ ನಡುವೆಯೂ ಮದುವೆಯಾದರು. ಇಬ್ಬರೂ ತಮ್ಮ ಮದುವೆಯನ್ನು ಬಹಳ ಕಾಲ ರಹಸ್ಯವಾಗಿಟ್ಟಿದ್ದರು. ಈ ಘಟನೆಯ ನಂತರ ರಾಧಿಕಾ ಅವರ ತಂದೆ ಆಘಾತಕ್ಕೊಳಗಾಗಿದ್ದರಂತೆ.

25 ವರ್ಷಕ್ಕೂ ಹೆಚ್ಚು ಕಾಲ ನಟಿಯಾಗಿ ಚಂದನವನಲ್ಲಿ ಮಿಂಚಿದ ನಟಿ, ಇತ್ತೀಚಿಗೆ ಮತ್ತೆ ತೆರೆ ಮೇಲೆ ಬಂದರೂ ಅವರ ಸಿನಿಮಾಗಳು ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. ಪ್ರಸ್ತುತ ರಾಧಿಕಾ ಅನೇಕ ಉದ್ಯಮಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಸದ್ಯ ಅವರ ಆಸ್ತಿ ಮೌಲ್ಯ ಬರೋಬ್ಬರಿ 124 ಕೋಟಿ ಎಂದು ಅಂದಾಜಿಸಲಾಗಿದೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed